37 C
Hubli
ಏಪ್ರಿಲ್ 25, 2024
eNews Land
ಆರೋಗ್ಯ

ಡಿಸಿಯಿಂದ ಮುಚ್ಚಳಿಕೆ ಬರೆಸಿಕೊಂಡು ಲಸಿಕೆ ಹಾಕಿಸಿಕೊಂಡ ಭೂಪ!

ಇಎನ್ಎಲ್ ಧಾರವಾಡ:  ‘ಕೋವಿಡ್ ಲಸಿಕೆಯಿಂದ ನಿಮ್ಮ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ನಾವೇ ಜವಾಬ್ದಾರಿ. ಲಸಿಕೆ ತಗೊಳ್ಳಿ!

ಯಲ್ಲಾಪುರ ಓಣಿ ನಿವಾಸಿ ಆನಂದ ಕೊನ್ನೂರಕರ ಎಂಬುವವರಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿ ಬರೆದುಕೊಟ್ಟ ಮುಚ್ಚಳಿಕೆ ಇದು. ಅಷ್ಟೇ ಅಲ್ಲ, ಅವರಿಗೆ ವಿಶ್ವಾಸ ಮೂಡಿಸಿ ಕೋವ್ಯಾಕ್ಸಿನ್ ಲಸಿಕೆಯನ್ನೂ ನೀಡಲಾಯಿತು.

ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಂಡ ಕಾರಣ ಜಿಲ್ಲಾಧಿಕಾರಿ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿ ಧಾರ್ಮಿಕ ಮುಖಂಡರ ಸಭೆ ನಡೆಸಿದರು. ಈ ವೇಳೆ ಎದ್ದುನಿಂತ ಆನಂದ, ನಮ್ಮ ಕುಟುಂಬ ಸದಸ್ಯರು ಈಗಾಗಲೇ ಲಸಿಕೆ ಪಡೆದಿದ್ದಾರೆ. ನಾನು ಲಸಿಕೆ ಪಡೆದರೆ ಹೆಚ್ಚು ಕಡಿಮೆಯಾದರೆ ಎನ್ನುವ ಭಯ ಕಾಡುತ್ತಿದೆ. ನನಗೆ ಏನಾದರೂ ಆದರೆ ಕುಟುಂಬದ ಕಥೆಯೇನು? ಜಿಲ್ಲಾಡಳಿತವೇ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಬರೆದುಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿ ಹೇಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಲಸಿಕೆಯಿಂದ ಅಡ್ಡ ಪರಿಣಾಮ ಅಥವಾ ದುಷ್ಪರಿಣಾಮ ಉಂಟಾದರೆ ನಾವು ಜವಾಬ್ದಾರಿ ವಹಿಸಿಕೊಳ್ಳುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಡುತ್ತೇವೆ’ ಎಂದರು. ಜಿಲ್ಲಾಧಿಕಾರಿ ಸೂಚನೆಯಂತೆ ತಕಣ ಸಿಬ್ಬಂದಿಯಿಂದ ಮುಚ್ಚಳಿಕೆ ಪತ್ರ ಬರೆಸಿ ಅದಕ್ಕೆ  ಸಹಿ ಹಾಕಿದರು.

ಜಿಲ್ಲಾ ಪಂಚಾಯಿತಿ ಸಿಇಒ, ಉಪ ವಿಭಾಗಾಧಿಕಾರಿ ಕೂಡ ಸಹಿ ಹಾಕಿ ಪತ್ರ ನೀಡಿದರು. ಅಲ್ಲದೆ, ಬಳಿಕ ಆನಂದ ಅವರಿಗೆ ಕೋಟ್ಯಾಕ್ಸಿನ್ ಲಸಿಕೆ ಹಾಕಿಸಲಾಯಿತು.

Related posts

ಸಕ್ಕರೆ ಖಾಯಿಲೆಗೆ ಬದನೆಕಾಯಿ ಉಪಯುಕ್ತ

eNEWS LAND Team

ಧಾರವಾಡ: ಎಸ್ಡಿಎಂ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

eNewsLand Team

ಕೋವಿಡ್; ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ: ಸಿಎಂ

eNewsLand Team