29 C
Hubli
ಸೆಪ್ಟೆಂಬರ್ 26, 2023
eNews Land
ಜನಪದ ಸಣ್ಣ ಸುದ್ದಿ

ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಸಂಗೀತಾಭ್ಯಾಸಕ್ಕೆ ಪ್ರವೇಶ ಫೆ.15 ಹಾಗೂ 16 ರಂದು ಆಡಿಷನ್

ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಉಣಕಲ್‌ನಲ್ಲಿ ಇರುವ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನಲ್ಲಿ ಬರುವ ಮಾರ್ಚ್‌ನಿಂದ ಪ್ರಾರಂಭವಾಗುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಕಲಿಕೆಗೆ ಪ್ರವೇಶ ಪಡೆಯಲು ಫೆ.15 ಹಾಗೂ 16 ರಂದು ಧ್ವನಿಪರೀಕ್ಷೆ(ಆಡಿಷನ್) ಹಾಗೂ ಸಂದರ್ಶನ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಆಸಕ್ತ ಅಭ್ಯರ್ಥಿಗಳು ಹಾಜರಾಗಲು ತಿಳಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಹೆಸರಾಂತ ಸಂಗೀತಗಾರರ ಸಮ್ಮುಖದಲ್ಲಿ ಸಂದರ್ಶನ ನಡೆಯಲಿವೆ. ಅಭ್ಯರ್ಥಿಗಳು ನಿಗದಿತ ದಿನಗಳಂದು ಬೆಳಿಗ್ಗೆ 10 ಗಂಟೆಗೆ ಹಾಜರಿರಬೇಕು ಎಂದು ಟ್ರಸ್ಟ್ ಆಡಳಿತಾಧಿಕಾರಿ ಜಿ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ತ್ಯಾಗವೀರ ದಾನಿ ಲಿಂಗರಾಜ ದೇಸಾಯಿ ಜಯಂತಿ

eNEWS LAND Team

ಅಣ್ಣಿಗೇರಿ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.18ಕ್ಕೆ

eNEWS LAND Team

ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

eNEWS LAND Team