36.8 C
Hubli
ಮಾರ್ಚ್ 29, 2024
eNews Land
ಜನಪದ ಸುದ್ದಿ

ಕನಕದಾಸರ ತತ್ವಪದ ಪ್ರಸ್ತುತ ಸಮಾಜಕ್ಕೆ ಮಾದರಿ:ಬಸವರಾಜ ಕುಬಸದ

ಇಎನ್ಎಲ್ ಅಣ್ಣಿಗೇರಿ : ಸಮಾಜದಲ್ಲಿ ಜನಸಾಮನ್ಯರು ಅರಿತು ಅಳವಡಿಸಿಕೊಳ್ಳುವಂಥ ದಾಸಸಾಹಿತ್ಯ ಮೂಲಕ ತತ್ವಸಂದೇಶ ನುಡಿ ಸಾಹಿತ್ಯದ ರೂವಾರಿಗಳಾಗಿದ್ದರೆಂದು ಹಿರಿಯ ಪತ್ರಕರ್ತ ಬಸವರಾಜ ಕುಬಸದ ಹೇಳಿದರು.
ಪಟ್ಟಣದ ಮಾರ್ಕೆಟಿನಲ್ಲಿರುವ ಮಾರತಿ ದೇವಸ್ಥಾನದಲ್ಲಿ ರನ್ನ ಕವಿ ಬಳಗದಿಂದ 534ನೇ ಕನಕದಾಸರ ಜಯಂತಿ ಆಚರಣೆ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನಕದಾಸರ ಜೀವನ, ಬದುಕು, ಬರಹ, ವೈರಾಗ್ಯದ ಕುರಿತು ಕವಿ ಪಾಂಡುರoಗ ಓಸೇಕರ ಮಾತನಾಡಿದರು.
ಕನಕದಾಸರ ಬದುಕಿನ ತತ್ವಪದಗಳು ಜನಮಾಸದಲ್ಲಿ ಸೆಲೆಯಾಗಿವೆ. ಅವರ ಕೃತಿಗಳು ನಾಡಿನ ಸಂಸ್ಕೃತಿಯ ಸಂಪತ್ತಾಗಿವೆ. ಎಂದು ಶಿಕ್ಷಕ ಈರಣ್ಣ ಹೇಳಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಕಂಬಿಮಠ, ಅರಣೋದಯ ಹೆಬಸೂರ, ನಾರಾಯಣ ಜಂಗಲ ಉಮೇಶ ಬಿಲ್ಲದಣ್ಣವರ, ಬಿ.ವಿ.ಅಂಗಡಿ, ರಫೀಕ್ ಮುಳಗುಂದ, ಅಪ್ಪಲಯ್ಯ ಮುಂಡರಗಿ, ಈರಣ್ಣ ಗುರಿಕಾರ, ಹೇಮಂತ ಕುರಹಟ್ಟಿ ಮಹಿಳೆಯರು ಉಪಸ್ಥಿತರಿದ್ದರು. ಹನಮಂತಪ್ಪ ಮಾಯಣ್ಣವರ ಸ್ವಾಗತಿಸಿದರು. ಮಂಜುನಾಥ ತಿಗಡಿ ನಿರೂಪಿಸಿದರು. ಪರುಶರಾಮ ಕೋಳಿವಾಡ ವಂದಿಸಿದರು.

Related posts

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

eNewsLand Team

ಸಂತ ಶಿಶುನಾಳ ಶರೀಫರ ಪುರಾಣ ಪ್ರವಚನ

eNEWS LAND Team

ಪಕ್ಷಾತೀತ, ಧರ್ಮಾತೀತ, ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ: ಡಿಸಿ ಗುರುದತ್ತ ಹೆಗಡೆ

eNEWS LAND Team