34 C
Hubli
ಮಾರ್ಚ್ 23, 2023
eNews Land
ಜನಪದ ಸಂಸ್ಕೃತಿ

ರಂಗಗೀತೆ, ನಾಟಕ ಪ್ರದರ್ಶನ ಕಲಾವಿದರಿಗೆ ದುತ್ತರಗಿ ಪ್ರಶಸ್ತಿ

Listen to this article

ಪಿ.ಬಿ.ದುತ್ತರಗಿ ಸ್ಮರಣೋತ್ಸವ, ರಂಗಗೀತೆ, ನಾಟಕ ಪ್ರದರ್ಶನ
6 ಜನ ಕಲಾವಿದರಿಗೆ ದುತ್ತರಗಿ ಪ್ರಶಸ್ತಿ ಪ್ರಧಾನ.

ಇಎನ್ಎಲ್ ಬಾಗಲಕೋಟೆ
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಪಿ.ಬಿ.ದುತ್ತರಗಿ ಅವರ ಸ್ಮರಣೋತ್ಸವದ ಅಂಗವಾಗಿ ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಸೋಮವಾರ 6 ಜನ ವಿವಿಧ ಕಲಾವಿದರಿಗೆ ಪಿ.ಬಿ.ದುತ್ತರಗಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಿ.ಬಿ.ದುತ್ತರಗಿ ಟ್ರಸ್ಟ್ ಸಹಯೋಗದಲ್ಲಿ ದುತ್ತರಗಿ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ, ರಂಗಗೀತೆ ಹಾಗೂ ನಾಟಕ ಕಾರ್ಯಕ್ರಮದಲ್ಲಿ ರಂಗ ನಟರಾದ ರುದ್ರಪ್ಪ ಮತ್ತಿಕಟ್ಟಿ, ನಂದಾ ಹೊಸಮನಿ, ನಾಟಕ ನಿರ್ದೇಶಕ ವಿರುಪಾಕ್ಷಯ್ಯ ಹಿರೇಕಲ್ಲಪ್ಪನವರ, ನಾಟಕ ಸಂಗೀತಗಾರ ಇದ್ದಲಗಿ ದಾದೇಸಾಬ ಬಾಬು, ನಾಟಕ ನೇಪಥ್ಯ ಗಿರಿರಾಜಶೆಟ್ಟಿ ಜೀವನವರ ಹಾಗೂ ನಾಟಕ ಸಾಹಿತಿ ರಾಜಮಹಮ್ಮದ ಮುಲ್ಲಾ ಅವರಿಗೆ ದುತ್ತರಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಿ.ಬಿ.ದುತ್ತರಗಿ ಟ್ರಸ್ಟ್‍ನ ಸದಸ್ಯ ಎಸ್.ಜಿ.ನಂಜಯ್ಯನಠ ಅವರು ನಾಟಕ ಕ್ಷೇತ್ರಕ್ಕೆ ಪಿ.ಬಿ.ದುತ್ತರಗಿಯವರ ಕೊಡುಗೆ ಅಪಾರವಾಗಿದ್ದು, ಅವರು ಬರೆದ ಕೌಟುಂಬಿಕ ನಾಟಕಗಳಿಂದಲೇ ಪ್ರಸಿದ್ದಿ ಪಡೆದಿದ್ದರು. ಐತಿಹಾಸಿಕ ನಾಟಕಗಳನ್ನು ಬರೆಯುವ ಮುನ್ನ ಇತಿಹಾಸ, ಪೌರಾಣಿಕ ನಾಟಕ ರಚಿಸುವ ಮುನ್ನ ಪುರಾಣಗಳನ್ನು ಅಭ್ಯಸುತ್ತಿದ್ದರು. ಇತ್ತೀಚೆಗೆ ಕೀಳು ಮಟ್ಟದ ಭಾಷೆಯನ್ನು ಬಳಕೆಯಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಕಲಾವಿದ ರಾಜು ತಾಳಿಕೋಟಿ, ಗಾಯಕ ಗುರುರಾಜ ಹೊಸಕೋಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ರವಿಂದ್ರ ಕಲಬುರ್ಗಿ, ಟ್ರಸ್ಟ್ ನ ಸದಸ್ಯರಾದ ಮಹಾಂತೇಶ ಗಜೇಂದ್ರಗಡ, ಚಂದ್ರಶೇಖರ ದೇಸಾಯಿ, ಡಾ.ಪ್ರಕಾಶ ಖಾಡೆ, ಡಾ.ಮಲ್ಲಿಕಾರ್ಜುನ ಕುಂಬಾರ, ಕನ್ನಡ ಮತ್ತಿ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವೇದಿಕೆ ಮೇಲೆ ರಂಗಭೂಮಿ ಹಿರಿಯ ಕಲಾವಿದೆ ಸುನಂದ ಕಂದಗಲ್ ಮತ್ತು ತಂಡದಿಂದ ರಂಗಗೀತೆ ಪ್ರಸ್ತುಗೊಂಡವು. ಇಲಕಲ್ಲಿನ ನಾಟ್ಯರಾಣಿ ಕಲಾ ಸಂಘದಿಂದ ಪಿ.ಬಿ.ದುತ್ತರಗಿ ವಿರಚಿತ ಉಮಾರಾಣಿ ಬಾರಿಗಿಡದ ನಿರ್ದೇಶಕ ಸಾಮಾಜಿಕ ನಾಟಕ ಸುಖದ ಸಂಪತ್ತಿಗೆ ಪ್ರದರ್ಶನ ನಡೆಯಿತು.

Related posts

ಕನ್ನಡ ಸಂಸ್ಕೃತಿ ಇಲಾಖೆ ರಂಗಾಯಣ ಹಾಗೂ ಗುಡ್ ನ್ಯೂಸ್ ಕಾಲೇಜ್ ಯುವ ರಂಗ ತರಬೇತಿ ಶಿಬಿರದ ಉದ್ಘಾಟನೆ.

eNEWS LAND Team

ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

eNEWS LAND Team

ಕನಕದಾಸರ ತತ್ವಪದ ಪ್ರಸ್ತುತ ಸಮಾಜಕ್ಕೆ ಮಾದರಿ:ಬಸವರಾಜ ಕುಬಸದ

eNEWS LAND Team