24.3 C
Hubli
ಮೇ 26, 2024
eNews Land
ಜನಪದ ಸುದ್ದಿ

ಕನ್ನಡಿಗರು ನೆಲ, ಜಲ, ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ, ಜಾನಪದ ಉಳಿಸಿ ಬೆಳೆಸಬೇಕಿದೆ: ಉಪನ್ಯಾಸಕ ಬಸನಗೌಡ

ಇಎನ್ಎಲ್ ಅಣ್ಣಿಗೇರಿ: ಸರ್ಕಾರ ಶಾಲಾ-ಕಾಲೇಜುಗಳಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ಸೌಲಭ್ಯ ಕಲ್ಪಿಸಿ, ಹೊಸ ಶಿಕ್ಷಣ ನೀತಿ ಅಳವಡಿಸಿದರೇ, ಕನ್ನಡ ನೆಲದ ಮಾತೃಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ,ಜನಪದ, ಶಿಕ್ಷಣ ಹೆಚ್ಚು ಪ್ರಚಲಿತವಾಗಿ ಉಳಿಸಲು ಬೆಳೆಸಲು ಸಾಧ್ಯವಿದೆ. ಪಾಲಕರು ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಆಸಕ್ತಿ ತೋರಬೇಕಿದೆ. ಕನ್ನಡ ಭಾಷಾಪ್ರಭುತ್ವ ಪ್ರಜ್ವಲಿಸಲು ಕನ್ನಡ ಶಿಕ್ಷಣಕ್ಕೆ ಮಹತ್ವ ಕೊಡುವಲ್ಲಿ ಪ್ರತಿಯೊಬ್ಬ ಕನ್ನಡಿಗರ ಪಾತ್ರವಿದೆ ಎಂದು ಉಪನ್ಯಾಸಕ ಬಿ.ಎಸ್.ಬಸನಗೌಡ ಹೇಳಿದರು. ಪಟ್ಟಣದ ಬಾವುಸಾಹೇಬ ಬ್ರಹ್ಮಶಾಲೆಯಲ್ಲಿ ಅಣ್ಣಿಗೇರಿ ತಾಲೂಕ ಕಸಾಪ ಘಟಕ ಆಯೋಜಿಸಿದ ದತ್ತಿ, ಉಪನ್ಯಾಸ ,ಸಂಗೀತ, ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಕ ಎಚ್.ಎನ್.ರಾಮನಗೌಡರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ವೈಚಾರಿಕತೆ ಕುರಿತು ಉಪನ್ಯಾಸ ನೀಡಿದರು.
ಸಾನಿಧ್ಯವಹಿಸಿದ್ದ ಸ.ಸ.ಡಾ.ಎ.ಸಿ.ವಾಲಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ ಅವರ ಜೀವನ ಸಾಧನೆ ಕಂಡುಕೊoಡ ಸತ್ಯ ಮಾರ್ಗದ ಸಾಧನೆ ಕುರಿತು ವಿವರಿಸಿದರು.ಮಹಾತ್ಮರ, ಸತ್ಪುರಷರ, ಮಹನೀಯರ, ಬದುಕಿನ ಮೌಲ್ಯಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದು, ಧರ್ಮದ ತತ್ವ ಸಿದ್ಧಾಂತಗಳನ್ನರಿತು, ಆಚರಣೆಯಲ್ಲಿ ತೊಡಗಿದರೇ, ಸಾರ್ಥಕ ಜೀವನ ಸಾಗಿಸಲು ಸಾಧ್ಯವೆಂದು ಹೇಳಿದರು. 
ದಿ.ಚೆನ್ನಬಸಪ್ಪ ದಾನಪ್ಪ ಹೂಗಾರ, ದಿ.ಶ್ರೀಮತಿ ಮಹಾಂತವ್ವ ಚೆನ್ನಬಸಪ್ಪ ಹೂಗಾರ ದತ್ತಿ, ಕುಟುಂಬದ  ಅರುಣಕುಮಾರ ಚೆ.ಹೂಗಾರ ದಿ.ಶ್ರೀಮತಿ ಪಾರ್ವತಿದೇವಿ, ಮ್ಹಾಳಶೇಠ ವೆರ್ಣೇಕರ ದತ್ತಿ ಕುಟುಂಬದ  ಸುಬ್ರಹ್ಮಣ್ಯ ಸಿ.ವೆರ್ಣೇಕರ ಅವರನ್ನು ಅಣ್ಣಿಗೇರಿ ತಾಲೂಕ ಕಸಾಪ ಘಟಕದಿಂದ ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷಕಿ ಜೆ.ಕೆ.ಅಣ್ಣಿಗೇರಿ ಮಾತನಾಡಿ  ದಿ.ಮಹಾಂತವ್ವ ಚ.ಹೂಗಾರ ಅವರ ಆದರ್ಶ ಬದುಕು, ಜೀವನ, ಶೈಕ್ಷಣಿಕ ಕ್ಷೇತ್ರದ ಸರ್ಕಾರಿ ಸೇವೆ ಸಾಮಾಜಿಕ ಸೇವೆ,ಧಾರ್ಮಿಕ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ವೃಂದಕ್ಕೆ ಮಾತೆಯಾಗಿ, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ, ಕರ್ತವ್ಯನಿಷ್ಠೆ, ಪ್ರಮಾಣಿಕತೆ, ಸೇವಾ ಮನೋಭಾವ, ಸಾಮಾಜಿಕ ಚಿಂತನೆ, ಸನ್ಮಾರ್ಗ ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಲಲಿತಾ ಸಾಲಿಮಠ ದಿ.ಪಾರ್ವತಿದೇವಿ ಎಮ್.ವೆರ್ಣೇರಕ ಅವರ ಆದರ್ಶ ಜೀವನ ,ಸಂಸ್ಕಾರ, ಸಂಪ್ರದಾಯ, ಮಾನವೀಯ ಧರ್ಮದ ಮೌಲ್ಯಗಳನ್ನು ಮಕ್ಕಳಿಗೆ ಬಿತ್ತಿದ ಪರಿಣಾಮ ಅವರ ಜೇಷ್ಠ ಸುಪುತ್ರರಾದ ಚಂದ್ರಕಾoತ ಎಮ್ ವೆರ್ಣೇಕರ ನಿವೃತ ಸಬ್’ರಜಿಸ್ಟರ, ಅಣ್ಣಿಗೇರಿ ಪುರಸಭೆ ಮಾಜಿ ಉಪಾಧ್ಯಕ್ಷರು, ಅಣ್ಣಿಗೇರಿ ತಾಲೂಕ ನಿವೃತ್ತ ನೌಕರರ ಸಂಘದ ಅಧ್ಯಕ್ಷರು, ಧಾರ್ಮಿಕ ಕ್ಷೇತ್ರದಲ್ಲಿ ದುರಸ್ತಿಯಲ್ಲಿದ್ದ ಕಾಳಮ್ಮದೇವಿ ದೇವಸ್ಥಾನ, ವೆಂಕಟೇಶ್ವರ ದೇವಸ್ಥಾನ ನಿರ್ಮಾಣದ ಹೊಣೆ ಹೊತ್ತು ಸಮಾಜ ಭಾಂದವರ ಸಹಕಾರ ಪಡೆದು ದೇವಸ್ಥಾನ ಕಟ್ಟಡ ನಿರ್ಮಾಣಗೊಳಿಸಿದರು. ಅಣ್ಣಿಗೇರಿ ತಾಲೂಕಿನ ಬ್ರಾಹ್ಮಣ ಸಮಾಜ ಸಮುದಾಯ ಭವನ, ಪಟ್ಟಣದ ಪುರಸಭೆ ಉಪಾಧ್ಯಕ್ಷರಾಗಿ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಸರಕಾರಿ ಸೇವೆ,ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಕರ್ತವ್ಯನಿಷ್ಠೆ, ಸೇವೆಗೈದಿರುವ ಅವರು ಹೆತ್ತ ತಾಯಿ ಸ್ಮರಣಾರ್ಥ ಕನ್ನಡ ತಾಯಿಗೆ ದತ್ತಿ ದಾನ ನೀಡಿರೋದು ಶ್ಲಾಘನೀಯ. ಅಂತಹ ಪುತ್ರರನ್ನು ನೀಡಿದ ತಾಯಿ ಆದರ್ಶ ಬದುಕು ಸರ್ವರಿಗೂ ಮಾದರಿಯಾಗಿದೆ ಎಂದರು.
ನೂತನ ದತ್ತಿ ದಾನಿಗಳಾದ ನಿವೃತ್ತ ಪ್ರಾಧ್ಯ್ಯಾಪಕ ಡಾ.ಮೋಹನ ಅಣ್ಣಿಗೇರಿ, .ಶಿಕ್ಷಕಿ ವಿಜಯಗಂಗಾ ಹರ್ತಿಮಠ ಉಪನ್ಯಾಸಕರಾದ ಬಿ.ಎಸ್.ಬಸನಗೌಡ, ಎಚ್. ಎನ್.ರಾಮನಗೌಡರ, ಅವರನ್ನು ಕಸಾಪ ಘಟಕದಿಂದ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಎಸ್.ಬಿ.ಪಾಟೀಲ,ನಿವೃತ್ತ ಪ್ರಾಧ್ಯಾಪಕ ಡಾ ಮೋಹನ ಅಣ್ಣಿಗೇರಿ  ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಕಸಾಪ ಘಟಕದ ಅಧ್ಯಕ್ಷ ರವಿರಾಜ ವೆರ್ಣೇಕರ ಅಧ್ಯಕ್ಷತೆ ವಹಿಸಿದ್ದರು.  ಕೋಶಾಧ್ಯಕ್ಷ ಮಹೇಶ ಮುಂಡರಿಗಿ, ಮಾಜಿ ಅಧ್ಯಕ್ಷರಾದ ಪ್ರಕಾಶ ಅಂಗಡಿ, ಕೃಷ್ಣಾ ಜಿಂಗಾಡಿ, ಈಶ್ವರಪ್ಪ ಉಳ್ಳಾಗಡ್ಡಿ, ಎನ್.ಜಿ.ಮೇಲ್ಮುರಿ, ವಿ.ಎಮ್.ಹಿರೇಮಠ, ಅರ್ಜುನ ಕಲಾಲ, ಕಸಾಪ ಬಳಗದ ಪದಾಧಿಕಾರಿಗಳು, ಸರ್ವ ಸದಸ್ಯರು, ಉಪಸ್ಥಿತರಿದ್ದರು. ಕುಮಾರಿ ಫರ್ಜಾನಾ ಆರ್. ಕಲೇಗಾರ ಭರತನಾಟ್ಯ ಮಾಡಿದರು. ಮಲ್ಲಪ ಮೀಸಿಯವರ, ಹಾಗೂ ಪ್ರಶಾಂತ ಹಂದಿಗೋಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಬಿ.ವಿ.ಅಂಗಡಿ ನಿರೂಪಿಸಿದರು. ವಿ.ಎಮ್.ಹಿರೇಮಠ ಸ್ವಾಗತಿಸಿದರು.

Related posts

ಡ್ರಗ್ಸ್ ತಡೆಗೆ ಸರ್ಕಾರದ ಜೊತೆ ಕೈ ಜೋಡಿಸಿ: ಸಿಎಂ

eNewsLand Team

ಅಪಘಾತಕ್ಕೊಳಗಾದ ಹುಧಾ ಚಿಗರಿ!! ಎಲ್ಲಿ? ಯಾವಾಗ ನೋಡಿ?

eNEWS LAND Team

ಹುಬ್ಬಳ್ಳಿ: ಹಸಿರು ಬಣ್ಣದ ಬ್ಯಾಗಲ್ಲಿ ಅದನ್ನು ತರ್ತಿದ್ದ ಆಸಾಮಿ ಅಂದರ್!

eNewsLand Team