34 C
Hubli
ಮಾರ್ಚ್ 23, 2023
eNews Land
ಜಿಲ್ಲೆ

ಭಾರತೀಯ ಸಂಸ್ಕೃತಿ ಜಗತ್ತಿಗೆ ಶ್ರೇಷ್ಠ: ವಿರೇಂದ್ರ ಶ್ರೀಗಳು

Listen to this article

ಇಎನ್ಎಲ್ ಅಣ್ಣಿಗೇರಿ

ಭಾರತೀಯ ಸಂಸ್ಕೃತಿ, ಸಂಪ್ರದಾಯ, ಧರ್ಮಾಚರಣೆ, ಜಗತ್ತಿನಲ್ಲಿ ಶ್ರೇಷ್ಠವೆಂದು ಸಾನ್ನಿಧ್ಯ ವಹಿಸಿದ್ದ ವಿರೇಂದ್ರ ಶ್ರೀಗಳು ಆಶೀರ್ವಚನದಲ್ಲಿ ನುಡಿದರು.

ಪಟ್ಟಣದ ನಾಗಲಿಂಗೇಶ್ವರ ಮಠದಲ್ಲಿ ಆಯೋಜಿಸಿದ 13ನೇ ನಾಗಲಿಂಗ ಗೋಷ್ಠಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

ಉಪನ್ಯಾಸಕ ಎನ್.ಎಸ್.ಮೇಲ್ಮೂರಿ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಪ್ರದಾಯ, ಧರ್ಮಾಚರಣೆ, ಆಚಾರ-ವಿಚಾರ ತತ್ವ ಸಿದ್ದಾಂತ, ಶರಣರ ವಚನ ಸಾಹಿತ್ಯ, ಸಕಲ ಜೀವಾತ್ಮರಿಗೆ ಲೇಸು ಬಯಸುವ ನೈತಿಕ ಮೌಲ್ಯಗಳ ಕುರಿತು ಸಮಗ್ರವಾಗಿ ಮಾತನಾಡಿದರು.

ಶಿಕ್ಷಕ ಬಿ.ವಿ. ಅಂಗಡಿ ಮಾನವ ಧರ್ಮದ ಕಲ್ಯಾಣಕ್ಕೆ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದರು.

ಪ್ರಸಾದ ವ್ಯವಸ್ಥೆ ಕಲ್ಪಿಸಿದ ವಿರುಪಾಕ್ಷಯ್ಯ ಚೂರಿಮಠ ದಂಪತಿಗಳನ್ನು ಹಾಗೂ ಚೆನ್ನಪ್ಪ ಹೊಸಳ್ಳಿ, ಮಂಜು ಜಂಗಲ್ ಅವರಿಗೆ ಶ್ರೀಗಳು ಸನ್ಮಾನಿಸಿದರು.

ಈ ವೇಳೆ ಪ್ರಕಾಶ ಸಂಗಳದ, ಬಸಣ್ಣ ಕೋಳಿವಾಡ, ಮಠದ ಸದ್ಭಕ್ತರು ಉಪಸ್ಥಿತರಿದ್ದರು. ಶಿಕ್ಷಕಿ ಲಲಿತಾ ಸಾಲಿಮಠ ನಿರೂಪಿಸಿ, ವಿ.ಎಂ ಹಿರೇಮಠ ಸ್ವಾಗತಿಸಿದರು. ಎಂ.ವಿ.ಮುತ್ತಲಗೇರಿ ವಂದಿಸಿದರು.

Related posts

ಧಾರವಾಡ ಎಸ್‍ಎಸ್‍ಎಲ್‍ಸಿ ಸಾಧಕರಿಗೆ ಸನ್ಮಾನಿಸಿ ಡಿಸಿ ಹೇಳಿದ್ದೇನು?

eNewsLand Team

ಬಿಜೆಪಿಗೆ ಕಾಂಗ್ರೆಸ್ ಗುನ್ನಾ!! ಪಾಲಿಕೆ ಆವರಣದಲ್ಲೆ ತ್ಯಾಜ್ಯ ಸುರಿದ್ರು!!!

eNewsLand Team

ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ಫುಲ್ ಸ್ವಿಂಗ್; ಇವತ್ತಿಂದ ನೀವು ಯಾವ ಮಾರ್ಗದಲ್ಲಿ ಸಂಚರಿಸಬೇಕು ತಿಳ್ಕೊಳಿ

eNewsLand Team