24 C
Hubli
ಸೆಪ್ಟೆಂಬರ್ 27, 2023
eNews Land
ಜಿಲ್ಲೆ

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅಹವಾಲು ಅರ್ಜಿಗಳು 634

 

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮ ವಾಸ್ತವ್ಯದ ನಿಮಿತ್ಯ ಇಂದು ಸಾರ್ವಜನಿಕರಿಂದ 632 ಅರ್ಜಿ ಸ್ವೀಕರಿಸಿ, 224 ಅರ್ಜಿ ಸ್ಥಳದಲ್ಲಿ ಇತ್ಯರ್ಥ: ಬಾಕಿ ಇರುವ 410 ಅರ್ಜಿಗಳನ್ನು ನಿಯಮಾನುಸಾರ ಶೀಘ್ರ ವಿಲೇವಾರಿ:
ಜಿಲ್ಲಾಧಿಕಾರಿ ನಿತೇಶ ಪಾಟೀಲ

ಇಎನ್ಎಲ್ ಸುದ್ದಿಸೇವೆ ::ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಇಂದು (ಅ.16) ಧಾರವಾಡ ತಾಲೂಕಿನ ವನಹಳ್ಳಿ ಹಾಗೂ ಉಳಿದ ಏಳು ತಾಲೂಕಿನ ಏಳು ಗ್ರಾಮಗಳಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ 634 ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಅದರಲ್ಲಿ 224 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ವಿವಿಧ ಇಲಾಖೆಗಳಿಗೆ ಸಂಭವಿಸಿದಂತೆ ಸ್ವೀಕರಿಸಿದ ಅರ್ಜಿಗಳು 341 , ವಿಲೇವಾರಿಯಾದ ಅರ್ಜಿಗಳು 158, ಬಾಕಿ ಉಳಿದ ಅರ್ಜಿಗಳು 183.

ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ತಹಸಿಲ್ದಾರ ಪ್ರಕಾಶ ನಾಶಿ ಅವರ ನೇತೃತ್ವದಲ್ಲಿ ಚನ್ನಾಪೂರದಲ್ಲಿ ಸ್ವೀಕರಿಸಿದ ಅರ್ಜಿಗಳು 102, ವಿಲೇವಾರಿಯಾದ ಅರ್ಜಿಗಳು 8, ಬಾಕಿ ಉಳಿದ ಅರ್ಜಿಗಳು 94.

ಹುಬ್ಬಳ್ಳಿ ನಗರ ತಾಲೂಕಿನ ಉಣಕಲ್ಲ ಗ್ರಾಮದಲ್ಲಿ ತಹಸಿಲ್ದಾರ ಶಶಿಧರ ಮಾಡ್ಯಾಳ ಅವರು ಸ್ವೀಕರಿಸಿದ ಅರ್ಜಿಗಳು 11, ವಿಲೇವಾರಿಯಾದ ಅರ್ಜಿಗಳು 6, ಬಾಕಿ ಉಳಿದ ಅರ್ಜಿಗಳು 5.

ಕುಂದಗೋಳ ತಾಲೂಕಿನ ರಾಮಾಪೂರ ಗ್ರಾಮದಲ್ಲಿ ತಹಸಿಲ್ದಾರ ಅಶೋಕ ಶಿಗ್ಗಾಂವಿ ಅವರು ಸ್ವೀಕರಿಸಿದ ಅರ್ಜಿಗಳು 66, ವಿಲೇವಾರಿಯಾದ ಅರ್ಜಿಗಳು 9 ಮತ್ತು ಬಾಕಿ ಉಳಿದ ಅರ್ಜಿಗಳು 57.

ಅಳ್ನಾವರ ತಾಲೂಕಿನ ಅಂಬೊಳ್ಳಿ ಗ್ರಾಮದಲ್ಲಿ ತಹಸಿಲ್ದಾರ ಮಾಧವ ಗಿತ್ತೆ ಅವರು ಸ್ವೀಕರಿಸಿದ ಅರ್ಜಿಗಳು 18, ವಿಲೇವಾರಿಯಾದ ಅರ್ಜಿಗಳು 7 ಮತ್ತು ಬಾಕಿ ಉಳಿದ ಅರ್ಜಿಗಳು 11.

ನವಲಗುಂದ ತಾಲೂಕಿನ ಪಡೆಸೂರ ಗ್ರಾಮದಲ್ಲಿ ತಹಸಿಲ್ದಾರ ನವೀನ ಹುಲ್ಲೂರ ಅವರು ಸ್ವೀಕರಿಸಿದ ಅರ್ಜಿಗಳು 29, ವಿಲೇವಾರಿಯಾದ ಅರ್ಜಿಗಳು 17 ಮತ್ತು ಬಾಕಿ ಉಳಿದ ಅರ್ಜಿಗಳು 12.
ಇಂದು
ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ತಹಸಿಲ್ದಾರ ಮಂಜುನಾಥ ಅಮಾಸಿ ಅವರು, ಸ್ವೀಕರಿಸಿದ ಅರ್ಜಿಗಳು 41, ವಿಲೇವಾರಿಯಾದ ಅರ್ಜಿಗಳು 4 ಮತ್ತು ಬಾಕಿ ಉಳಿದ ಅರ್ಜಿಗಳು 37.

ಕಲಘಟಗಿ ತಾಲೂಕಿನ ಅರೇಬಸವನಕೊಪ್ಪ ಗ್ರಾಮದಲ್ಲಿ ತಹಸಿಲ್ದಾರ ಯಲ್ಲಪ್ಪ ಗೊಣ್ಣವರ ಅವರು ಸ್ವೀಕರಿಸಿದ ಅರ್ಜಿಗಳು 26,
ವಿಲೇವಾರಿಯಾದ ಅರ್ಜಿಗಳು 15 ಮತ್ತು ಬಾಕಿ ಉಳಿದ ಅರ್ಜಿಗಳು 11.

ಜಿಲ್ಲೆಯಲ್ಲಿ ಇಂದು ಜಿಲ್ಲಾಧಿಕಾರಿ ಮತ್ತು ವಿವಿಧ ತಹಸಿಲ್ದಾರ ನೇತೃತ್ವದಲ್ಲಿ ಆಯೋಜಿಸಿದ್ದ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು ಸ್ವೀಕರಿಸಿದ ಅಹವಾಲು ಅರ್ಜಿಗಳು 634  ಮತ್ತು ವಿಲೇವಾರಿಯಾದ ಅರ್ಜಿಗಳು 224 ಹಾಗೂ 410 ಅರ್ಜಿಗಳು ಬಾಕಿ ಉಳಿದಿದ್ದು, ನಿಯಮಾನುಸಾರ ಕಾಲಮಿತಿಯಲ್ಲಿ ಬಾಕಿಯಿರುವ ಎಲ್ಲ ಅರ್ಜಿಗಳನ್ನು ಇತ್ಯರ್ಥ ಪಡಿಸಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಂಜೆ 6 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ.71.76 ರಷ್ಟು ಮತದಾನ; 6 ಗಂಟೆ ನಂತರವೂ ಕೆಲ ಮತಗಟ್ಟೆಗಳಲ್ಲಿ ಮುಂದುವರಿದಿರುವ ಮತದಾನ…

eNEWS LAND Team

ಅಣ್ಣಿಗೇರಿ ಪುರಸಭೆ ಚುನಾವಣೆ: ಮೂರು ದಿನ ಮದ್ಯ ಬ್ಯಾನ್!!

eNewsLand Team

ಗಡಿ ಚೆಕ್ ಪೋಸ್ಟ್ ಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಗುರುದತ್ತ ಹೆಗಡೆ

eNewsLand Team