23.8 C
Hubli
ಮಾರ್ಚ್ 28, 2023
eNews Land
ಜಿಲ್ಲೆ

ಬೆಲೆ ಏರಿಕೆ; ಬೈಕಿಗೆ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಕಾಂಗ್ರೆಸ್ಸಿಗರು!!

Listen to this article

ಇಎನ್ಎಲ್ ಧಾರವಾಡ: ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನದ ಭಾಗವಾಗಿ ಸಿಲಿಂಡರ್, ಸ್ಕೂಟರ್, ಬೈಕ್’ಗಳಿಗೆ ಹೂವಿನ ಹಾರ ಹಾಕಿ, ಹಲಗಿ ಬಾರಿಸುವ ಮೂಲಕ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆಯನ್ನು ನಗರದ ಗೋಪನಕೊಪ್ಪ ವೃತ್ತದಲ್ಲಿಂದು ನಡೆಸಲಾಯಿತು.

ವಿದ್ಯಾನಗರ ಮತ್ತು ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ ವಿನೂತನ ಪ್ರತಿಭಟನೆ ನಡೆಸಿದ ಕಾಂಗ್ರೆಸಿಗರು, ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಆಡಳಿತರೂಢ ಬಿಜೆಪಿ ಸರ್ಕಾರದ ದುಬಾರಿ ಆಡಳಿತದಿಂದ ಜನರು ರೋಸಿ ಹೋಗಿದ್ದು, ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುವಂತ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಬೆಂದು ಹೋಗಿರುವ ಜನತೆ ಬದಲಾವಣೆ ಬಯಸುತ್ತಿದೆ‌ ಎಂದರು.

ಕಾರ್ಯಕರ್ತ ಸುನೀಲ್ ಮಠಪತಿ ಮಾತನಾಡಿ, ಪೆಟ್ರೋಲ್, ಡಿಸೇಲ್, ಸಿಲಿಂಡರ್ ಬೆಲೆ ಗಗನಕ್ಕೆ ಏರುತ್ತಿದ್ದು, ಜನಸಾಮಾನ್ಯರು ನಲಗುವಂತಾಗಿದೆ. ಬಿಜೆಪಿ ಸರ್ಕಾರ ಬರೀ ತೆರಗೆ ವಸೂಲಿ ಮಾಡುತ್ತಿದ್ದಾರೆಯೇ ಹೊರತು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.

ಇದನ್ನು ಓದಿ ಡೇಂಜರಸ್ ಅಪ್ಸರಾ!! ಇದು ಆರ್’ಜಿವಿಯ ಲೆಸ್ಬಿನ್ ಕ್ರೈಂ ಸಿನಿಮಾ! ಏ.8ಕ್ಕೆ ತೆರೆಗೆ..

ಈ ವೇಳೆ ಪಾಲಿಕೆ ಸದಸ್ಯ ಸುವರ್ಣ ಕಲಕುಂಟ್ಲಾ, ಪ್ರಕಾಶ ಕುರಹಟ್ಟಿ, ಸಂದೀಲ್ ಕುಮಾರ್, ಆರಿಫ್ ಭದ್ರಾಪುರ, ಸುನಿಲ ಮಠಪತಿ, ಮಹಮ್ಮದ್ ಶರೀಫ ಗರಗದ, ಪ್ರಕಾಶ ಕ್ಯಾರಕಟ್ಟಿ, ಹೂವಪ್ಪ ದಾಯದೋಡಿ, ಫೀರಾಜಿ ಖಂಡೇಕರ್,ಅಶೋಕ ಕಲಾದಗಿ,ದೀಪಾ ಗೌರಿ, ಬಂಗಾರೇಶ ಹಿರೇಮಠ, ಶಾಕೀರ್ ಸನದಿ, ವೀರಣ್ಣ ಹಿರೇಹಾಳ ಸೇರಿ ಉಪಸ್ಥಿತರಿದ್ದರು.

Related posts

ನರೇಗಾ ಬಗ್ಗೆ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲಿಸಿ: ಡಾ. ಸುರಪುರ

eNewsLand Team

ಹುಬ್ಬಳ್ಳಿ ಕೇಶ್ವಾಪುರ – ರೈಲ್ವೇ ಕೆಳಸೇತುವೆ ನೂತನ ರಸ್ತೆ ಲೋಕಾರ್ಪಣೆ

eNewsLand Team

ಹುಬ್ಬಳ್ಳಿ; ಜ.4 ಮತ್ತು 5 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

eNewsLand Team