23.8 C
Hubli
ಮಾರ್ಚ್ 28, 2023
eNews Land
ಜಿಲ್ಲೆ

ನರೇಗಾ ಬಗ್ಗೆ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲಿಸಿ: ಡಾ. ಸುರಪುರ

Listen to this article

ಇಎನ್ಎಲ್ ಧಾರವಾಡ: ನರೇಗಾದಲ್ಲಿ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸುತ್ತಿದೆ. ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲಿಸಿ, ಪಾಕ್ಷಿಕವಾಗಿ ಕೂಲಿ ಪಾವತಿಸಬೇಕು. ತಾಂತ್ರಿಕ ಕಾರಣಗಳಿಂದ ಕೂಲಿ ಪಾವತಿ ವಿಳಂಬವಾದರೆ ಕೂಡಲೇ ನರೇಗಾ ಆಯುಕ್ತರಿಗೆ ಲಿಖಿತ ಮಾಹಿತಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರವಿಕುಮಾರ ಸುರಪುರ ಹೇಳಿದರು.

ವಚ್ರ್ಯುವಲ್ ವೇದಿಕೆ ಮೂಲಕ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧೀ ನರೇಗಾ ಯೋಜನೆಯು ಉದ್ಯೋಗ ಸೃಜನೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವರದಾನವಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಪ್ರತಿ 15 ದಿನಗಳ ಪ್ರಗತಿಯನ್ನು ತೌಲನಿಕವಾಗಿ ಪರಿಶೀಲನೆ ಮಾಡಬೇಕು. ಜಲಜೀವನ್ ಮಿಷನ್ ಅಡಿ ಕೈಗೊಂಡಿರುವ ಕಾಮಗಾರಿ ನಿಗದಿತ ವೇಳೆಲಿ ಪೂರ್ಣಗೊಳಿಸಬೇಕು. ಶೌಚಾಲಯ ನಿರ್ಮಾಣ ಕಾಮಗಾರಿಯ 3ನೇ ಪಾರ್ಟಿ ಪರಿಶೀಲನೆಯ ಅಂಶ ಗಮನಿಸಬೇಕು. ಜಿಲ್ಲೆಯ ಗ್ರಾಮಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಆಟೋ ಟಿಪ್ಪರ್‍ಗಳ ನಿರ್ವಹಣೆಗೆ ಸ್ಥಳೀಯವಾಗಿ ಸೊಸೈಟಿ ರಚಿಸಬೇಕು. ಅದರಿಂದಲೇ ನಿರ್ವಹಿಸಬೇಕು. ಬಾಟಲಿ, ಕಾಗದ, ಪ್ಲಾಸ್ಟಿಕ್ ಮುಂತಾದ ಒಣ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಆದಾಯ ಸಂಗ್ರಹಿಸಿ ಬಂದ ಹಣದಲ್ಲಿ ಕಾರ್ಯಕ್ರಮ ನಿರ್ವಹಣೆ ಆಗುವಂತೆ ಕ್ರಮ ಜರುಗಿಸಬೇಕು. ಪ್ರತಿ ತಾಲೂಕು ಪಂಚಾಯಿತಿಗೆ ಓರ್ವ ಗುಜರಿ ಅಥವಾ ಒಣ ತ್ಯಾಜ್ಯ ಖರೀದಿಸುವವರನ್ನು ಗುರುತಿಸಿ ಎಲ್ಲ ಪಂಚಾಯಿತಿಗಳ ಒಣ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ಹಸಿ ಕಸ ನಿರ್ವಹಣೆಯ ಘಟಕಗಳನ್ನು ಸ್ಥಾಪಿಸಬೇಕು ಎಂದರು.

ಕೃಷಿ ಇಲಾಖೆಯು ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸಮರ್ಪಕವಾಗಿ ಪೂರೈಸಬೇಕು. ನಕಲಿ ಬೀಜಗಳ ಮಾರಾಟ ತಡೆಯಲು ನಿರಂತರವಾಗಿ ತಪಾಸಣೆ ಕೈಗೊಳ್ಳಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳಡಿ ನೋಂದಣಿಯಾದ ರೈತರಿಗೆ ಸೌಕರ್ಯಗಳನ್ನು ತಲುಪಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ನೀಡುವ ಸೌಕರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರೈಸಿ ಎಸ್‍ಸಿಪಿ, ಟಿಎಸ್‍ಪಿ ಪ್ರಗತಿ ಸಾಧಿಸಲು ಸೂಚಿಸಿದರು.

ಜಿಪಂ ಸಿಇಒ ಡಾ.ಬಿ. ಸುಶೀಲಾ ಮಾತನಾಡಿ, ಜಿಲ್ಲೆಯಲ್ಲಿ 17 ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಇವುಗಳ ವ್ಯಾಪ್ತಿಯ 47 ಹಳ್ಳಿಗಳಲ್ಲಿ ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣಾ ಕಾರ್ಯ ಪ್ರಾರಂಭವಾಗಿದೆ. ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯಿಕ ಇಂಗು ಗುಂಡಿಗಳ ನಿರ್ಮಾಣ, ಜೈವಿಕ ನೀರು ಶುದ್ಧೀಕರಿಸಿ ಸಸಿ ಗಿಡಗಳಿಗೆ ಪೂರೈಸುವ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಅಮೃತ ಅಂಗನವಾಡಿ ಯೋಜನೆಯಡಿ 25 ಅಂಗನವಾಡಿಗಳ ದುರಸ್ತಿ, ಕಂಪೌಂಡ್ ನಿರ್ಮಾಣ, ಶೌಚಾಲಯ ನಿರ್ಮಾಣ, ವಿದ್ಯುದೀಕರಣ, ಫ್ಯಾನ್‍ಗಳ ಅಳವಡಿಕೆ ಕೈಗೊಳ್ಳಲಾಗಿದೆ. ನ್ಯಾಯಮೂರ್ತಿ ವೇಣುಗೋಪಾಲ ವರದಿ ಪ್ರಕಾರ ಕ್ರಮ ಜರುಗಿಸಲಾಗುತ್ತಿದೆ ಎಂದರು.

Related posts

ಬಿಜೆಪಿಗೆ ಕಾಂಗ್ರೆಸ್ ಗುನ್ನಾ!! ಪಾಲಿಕೆ ಆವರಣದಲ್ಲೆ ತ್ಯಾಜ್ಯ ಸುರಿದ್ರು!!!

eNewsLand Team

ಪದ್ಮಶ್ರೀ ನಡಕಟ್ಟಿನಗೆ ಸಚಿವ ಮುನೇನಕೊಪ್ಪ ಸನ್ಮಾನ

eNewsLand Team

ವಿದ್ಯಾರ್ಥಿನಿಯರಲ್ಲಿ ದೈರ್ಯ ತುಂಬಲು ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ- ಜಿಲ್ಲಾಧಿಕಾರಿ 

eNewsLand Team