30 C
Hubli
ನವೆಂಬರ್ 28, 2022
eNews Land
ಜಿಲ್ಲೆ

ಹೊಲ್ತಿಕೋಟಿ ಕೆರೆ ದುರಸ್ತಿ ಆರಂಭ

Listen to this article

ಇಎನ್ಎಲ್ ಧಾರವಾಡ

ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒಡೆದು ನೀರು ಹರಿಯುತ್ತಿದ್ದ ಹೊಲ್ತಿಕೋಟಿ ಕೆರೆ ದುರಸ್ತಿ ಕಾರ್ಯ ಆರಂಭವಾಗಿದೆ.

ಸುಮಾರು 15 ಲಕ್ಷ ರೂ.ಗಳ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ದುರಸ್ತಿ ಕಾರ್ಯ ನಿನ್ನೆಯಿಂದ ಆರಂಭವಾಗಿದೆ. ಇಂದು ಮಧ್ಯಾಹ್ನದಿಂದ ಹೊಲ್ತಿಕೋಟಿ ಭಾಗದಲ್ಲಿ ಮತ್ತೆ ಮಳೆ ಹಚ್ಚಾಗಿದ್ದು, ಈಗ ದುರಸ್ತಿ ಕಾರ್ಯ ನಿಧಾನವಾಗಿದೆ.

ಆದರೆ ಹರಿಯುತ್ತಿರುವ ನೀರು ಕೆರೆಯಲ್ಲಿ ಉಳಿಸಲು ಕ್ರಮ ವಹಿಸಲಾಗುತ್ತಿದೆ. ದುರಸ್ತಿ ಕಾರ್ಯವನ್ನು ತಕ್ಷಣಕ್ಕೆ ಕೈಗೊಳ್ಳಲಾಗುತ್ತಿದೆ. ಪೂರ್ಣಪ್ರಮಾಣದ ಕಾಮಗಾರಿ ಕೈಗೊಳ್ಳಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅಣ್ಣಿಗೇರಿ: ಪುರಸಭೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

eNewsLand Team

ವಿದ್ಯಾರ್ಥಿನಿಯರಲ್ಲಿ ದೈರ್ಯ ತುಂಬಲು ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ- ಜಿಲ್ಲಾಧಿಕಾರಿ 

eNewsLand Team

ಫೆ.1 ರಿಂದ 15 ರ ವರೆಗೆ ಹೊಸಯಲ್ಲಾಪೂರ ಕೋಳಿಕೆರೆ ಹೂಳೆತ್ತುವ ಕಾರ್ಯ

eNewsLand Team