eNews Land
ಜಿಲ್ಲೆ

ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ಫುಲ್ ಸ್ವಿಂಗ್; ಇವತ್ತಿಂದ ನೀವು ಯಾವ ಮಾರ್ಗದಲ್ಲಿ ಸಂಚರಿಸಬೇಕು ತಿಳ್ಕೊಳಿ

Listen to this article

ಇಎನ್ಎಲ್ ಹುಬ್ಬಳ್ಳಿ

ಶುಕ್ರವಾರ ಬೆಳಗಿನ ಜಾವದಿಂದ ಹುಬ್ಬಳ್ಳಿ ಶಹರದ ಹಳೇ ಬಸ್ಸ ನಿಲ್ದಾಣದ ಸಮೀಪ ಇರುವ ಬಸವ ವನ ಹತ್ತಿರದಿಂದ ಹೊಸೂರ ಸರ್ಕಲ್ ವರೆಗೆ ಮೇಲು ಸೇತುವೆ ಕಾಮಗಾರಿ ಪ್ರಾರಂಭ ಆಗುತ್ತಿರುವದರಿಂದ ಹಳೇ ಬಸ್ಸ ನಿಲ್ದಾಣದ ಮುಂದಿನ ಅಯೋದ್ಯಾ ಹೊಟೇಲ್ ಮುಂದೆ ಹಾಯ್ದು ವಿವಿಧ ಸ್ಥಳಗಳಿಗೆ ಹೋಗುವ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಮಹಾನಗರ ಪೊಲೀಸರು ಕೋರಿದ್ದಾರೆ.

  1.  ಚೆನ್ನಮ್ಮ ಸರ್ಕಲ್ ಮುಖಾಂತರ ಧಾರವಾಡ, ಗೋಕುಲ ರೋಡ, ಕಾರವಾರ ರೋಡ, ಬೆಳಗಾವಿ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಚೆನ್ನಮ್ಮ ಸರ್ಕಲ್, ಅಯೋಧ್ಯಾ ಹೊಟೇಲ್ ಮುಂದೆ, ಏಕುಮುಖ ರಸ್ತೆಯಲ್ಲಿ ಹಾಯ್ದು ಬಸವವನ ಕಾರ್ಪೋರೇಶನ್ ಬ್ಯಾಂಕ್ ಮುಂದೆ ಬಲತಿರುವ ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್, ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಗೋಕುಲ ರೋಡ, ಧಾರವಾಡ, ಬೆಳಗಾವಿ ಕಡೆಗೆ ಹೋಗುವುದು.
  2. ಕಾರವಾರ ರೋಡ ಕಡೆಯಿಂದ ಬರುವ ಭಾರಿ ವಾಹನಗಳ ಸಂಚಾರವನ್ನು ಮಹಾದೇವ ಮಿಲ್ಲ, ವಾಣಿವಿಲಾಸ ಸರ್ಕಲ್, ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಲಿಜನ್ ರಸ್ತೆಯ ಮುಖಾಂತರ ಗದಗ ರೋಡ ಮತ್ತು ನವಲಗುಂದ ರೋಡ ಕಡೆಗೆ ಹೋಗುವುದು.
  3. ಕಾರವಾರ ರೋಡ ಕಡೆಯಿಂದ ಬರುವ ಲಘು ವಾಹನಗಳು ಪೊಲೀಸ್ ಕ್ವಾಟರ‍್ಸ ಮುಂದೆ ಹಾಯ್ದು ಹಳೇ ಬಸ್ಸ ನಿಲ್ದಾಣ, ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೆ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ.
  4.  ಗೋಕುಲ ರೋಡ, ಹಳೇ ಪಿ ಬಿ ರೋಡ, ಧಾರವಾಡ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಜಿಲನ್ ರಸ್ತೆ ಮುಖಾಂತರ ಗದಗ, ನವಲಗುಂದ, ಬೆಂಗಳೂರ, ಕಾರವಾರ ಕಡೆಗೆ ಹೋಗುವುದು. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಕಾಟನ್ ಮಾರ್ಕೆಟ್, ಶಾರದಾ ಹೊಟೇಲ್ ರೋಟರಿ ಸ್ಕೂಲ ಮುಂದೆ ಹಾಯ್ದು ಹೋಗಬಹುದಾಗಿದೆ.
  5. ವಿಶ್ವೇಶ್ವರನಗರ, ವಿಜಯನಗರ, ದೇಶಪಾಂಡೆನಗರ ಕಡೆಯಿಂದ ಗೋಕುಲ ರೋಡ ಅಥವಾ ಧಾರವಾಡ ಕಡೆಗೆ ಹೋಗುವ ವಾಹನಗಳು ಶಾರಧಾ ಹೊಟೇಲ್ ಕ್ರಾಸ್ ಮುಖಾಂತರ ಕಾಟನ್ ಮಾರ್ಕೆಟ್, ಉತ್ತರ ಸಂಚಾರ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಮೂಲಕ ಲಕ್ಷಿö್ಮÃ ವೆ ಬ್ರೀಡ್ಜದಿಂದ ಬಲತಿರುವ ಪಡೆದು ಭಗತ್‌ಸಿಂಗ್ ಸರ್ಕಲ್, ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಹೋಗುವುದು.
  6. ಗಬ್ಬೂರ, ಬಂಕಾಪೂರ ಚೌಕ, ಹಳೇ ಪಿ.ಬಿ. ರಸ್ತೆಯ ಕಮರಿಪೇಟ್ ಮುಖಾಂತರ ಬರುವ ಎಲ್ಲಾ ವಾಹನಗಳು ಹಳೇ ಬಸ್ಸ ನಿಲ್ದಾಣ ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ ಮುಖಾಂತರ ಗೋಕುಲ ರೋಡ, ಧಾರವಾಡ ಕಡೆಗೆ ಹೋಗಬಹುದಾಗಿದೆ. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ಕಾಟನ್ ಮಾರ್ಕೆಟ್ ಮುಖಾಂತರ ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ಕೋರಲಾಗಿದೆ ಎಂದು ಪೊಲೀಸ್ ಕಮೀಷನರ ಹುಬ್ಬಳ್ಳಿ-ಧಾರವಾಡ ರವರು ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿರುತ್ತಾರೆ.

Related posts

ಅಣ್ಣಿಗೇರಿಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ; ಮುಂದುವರಿದ ಸಾವಿನ ಸರಣಿ

eNewsLand Team

ರಾಷ್ಟ್ರೀಯ ಯುವ ಜನೋತ್ಸವ ಯಶಸ್ವಿಗೊಳಿಸಿ -ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ

eNewsLand Team

ಗಡಿ ಚೆಕ್ ಪೋಸ್ಟ್ ಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಗುರುದತ್ತ ಹೆಗಡೆ

eNewsLand Team