27 C
Hubli
ಮಾರ್ಚ್ 28, 2023
eNews Land
ಜಿಲ್ಲೆ ರಾಜಕೀಯ

ಕುಮಾರಸ್ವಾಮಿ ಸಿಎಂ ಆಗೋದು ತಪ್ಪಿಸಲು ಸಾಧ್ಯವಿಲ್ಲ: ಹುಣಸಿಮರದ

Listen to this article

ಇಎನ್ಎಲ್ ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲಿನಲ್ಲಿ ಜನತಾದಳ ಜಾತ್ಯತೀತ ಪಕ್ಷದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯ ಮಹಿಳಾ ಪ್ರಮುಖ ಮುಖಂಡರ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗಾಗಿ ಬಾಗ್ಯಲಕ್ಷ್ಮೀ ಬಾಂಡ್, ಉಚಿತ ಸೈಕಲ್ ವಿತರಣೆ, ಲಾಟರಿ ಸರಾಯಿ ನೀಡಿದ, ಬೀದಿ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಜಾತಿ ಧರ್ಮಗಳ ನಡುವೆ ವಿಷ ಬೆರೆಸಿ ತಮ್ಮ ಬೇಳೆ ಬೇಯಿಸಿಕೊಳ್ಳುತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಈ ಎರಡು ರಾಷ್ಟ್ರೀಯ ಪಕ್ಷಕ್ಕೆ ತಕ್ಕ ಉತ್ತರ ನೀಡುವುದರಲ್ಲಿ ಯಾವುದೇ ಸಂದೇಹವೇ ಇಲ್ಲಾ. 2023ಕ್ಕೆ ಎಚ್. ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುವುದನ್ನು ಯಾರು ತಪ್ಪಿಸಲು ಸಾದ್ಯವಿಲ್ಲ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು. ಪಕ್ಷದ ಸದಸ್ಯರನ್ನು ಮಾಡಲು ಎಲ್ಲ ಮಹಿಳಾ ಮುಖಂಡರಿಗೆ ಸೂಚಿಸಿದರು.

ರೇಷ್ಮಾ ಮುಲ್ಲಾ, ವಿಮಲಾ ಹರೀಶ್ ಹಂಜಗಿ, ಪೂರ್ಣಿಮಾ ಹಂಜಗಿ ಅವರು ಪೂರ್ಣಿಮಾ ಸೌದತ್ತಿ ಅವರ ಸಮ್ಮುಖದಲ್ಲಿ ಸೇರ್ಪಡೆ ಮಾಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಈ ಎರಡು ಪಕ್ಷಗಳಿಂದ ಬೇಸತ್ತು ನೂರಾರು ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಅಬ್ದುಲ್ ರಜಾಕ್ ಐನಾಪೂರಿ, ಜನತಾದಳ ಜಾತ್ಯತೀತ ಪಕ್ಷಕ್ಕೆ ಸೇರ್ಪಡೆಯಾದರು.

ಮುಖ್ಯ ಅತಿಥಿಗಳಾಗಿ, ಪಕ್ಷದ ಮಹಾನಗರ ಜಿಲ್ಲಾ ಕಾರ್ಯಾಧ್ಯಕ್ಷ ಸಾದಿಕ್ ಹಕಿಮ, ಮಹಾನಗರ ಪ್ರಧಾನ ಕಾರ್ಯದರ್ಶಿ ನವೀನಕುಮಾರ ಮಡಿವಾಳರ, ಚುನಾವಣಾಧಿಕಾರಿ ತುಳಸಿಕಾಂತ ಖೋಡೆ, ಸಿದ್ದಲಿಂಗೆಶ್ವರಗೌಡ ಮಹಾಂತಒಡೆಯರ, ಅಹ್ಮದ್ ಅರಸಿಕೇರಿ, ಜಾಫರ್ ಕ್ಯಾಲಕೊಂಡ, ಸಲೀಂಖಾನ ಕುಡಚಿ, ಗಂಗಾಧರ ಪೆರೂರ, ಇಮ್ತಿಯಾಜ್ ಖಾನ್‌ ತಡಕೋಡ , ರಾಜು ನಾಯಕವಾಡಿ ನಾಗರಾಜ ಗುಡ್ಡದಕೇರಿ ಸಭೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

Related posts

ಬಿಟ್ ಕಾಯಿನ್; ಪ್ರಧಾನಿ ನರೇಂದ್ರ ಮೋದಿ ಗರಂ ಆದ್ರಾ? ಸಿಎಂಗೆ ಅಭಯ ನೀಡಿದ್ರಾ?

eNewsLand Team

ರಾಷ್ಟ್ರೀಯ ಯುವ ಜನೋತ್ಸವ ಯಶಸ್ವಿಗೊಳಿಸಿ -ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ

eNewsLand Team

ಸಿದ್ದರಾಮಯ್ಯ ನೀಡಿದ್ದು ದೌರ್ಭಾಗ್ಯ : ಸಿಎಂ ಬೊಮ್ಮಾಯಿ

eNewsLand Team