23 C
Hubli
ಸೆಪ್ಟೆಂಬರ್ 25, 2023
eNews Land
ಅಪರಾಧ ಜಿಲ್ಲೆ

ಅಣ್ಣಿಗೇರಿಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ; ಮುಂದುವರಿದ ಸಾವಿನ ಸರಣಿ

ಇಎನ್ಎಲ್ ಅಣ್ಣಿಗೇರಿ: ಕಳೆದ ವರ್ಷದ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದ ಪರಿಣಾಮ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸರಣಿ ಮುಂದುವರಿದಿದೆ.

ಅಣ್ಣಿಗೇರಿ ತಾಲೂಕಿನ ಮನಕವಾಡದ ರೈತ ಚನ್ನಬಸಪ್ಪ ನೀಲಪ್ಪ ಪಲ್ಲೇದ (45) ಮನೆಯ ನಡುವಿನ ಕೋಣೆಯಲ್ಲಿ ಮೇಲಿನ ಎಳೆಗೆ ಕಪ್ಪ ಬಣ್ಣದ ವಾಯರ್ ಕಟ್ಟಿ ತನ್ನಷ್ಟಕ್ಕೆ ತಾನೇ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ವ ಬೇರೆಯವರ ಜಮೀನುಗಳನ್ನು ಲಾವಣಿ ಮಾಡುತ್ತಾ ಬಂದಿದ್ದ ಇವರು ಜಮೀನನ್ನು ಸಾಗುವಳಿ ಮಾಡಲು ಕಳೆದ ವರ್ಷ ಹುಬ್ಬಳ್ಳಿಯ ಖಾಸಗಿ ಬ್ಯಾಂಕಿನಲ್ಲಿ 1,25000 ರೂ, ಹಾಗೂ ನವಲಗುಂದದ ಖಾಸಗಿ ಬ್ಯಾಂಕಿನಲ್ಲಿ 60,000/- ರೂ ಸಾಲವನ್ನು ಮಾಡಿ ಜಮೀನನ್ನು ಸಾಗುವಳಿ ಮಾಡುತ್ತಾ ಬಂದಿದ್ದ‌.

ತನ್ನ ಜಮೀನಲ್ಲಿ  ಕಳೆದ ಸಾರಿ  ಮೆಣಸಿನ ಪೀಕನ್ನು ಬೆಳೆದಿದ್ದು ಮಳೆ ಬಹಳ ಆಗಿದ್ದರಿಂದ ಜಮೀನದಲ್ಲಿ ಬೆಳೆದ ಪೀಕು ಲುಕ್ಸಾನ ಆಗಿದ್ದು ಹಾಗೂ ಊರಲ್ಲಿ ಸಹ ಕೈಗಡ ಸಾಲವನ್ನು ಮಾಡಿದ್ದು ತಾನು ಮಾಡಿದ ಸಾಲ ಮತ್ತು ಕೈಗಡ ಸಾಲವನ್ನು ತೀರಿಸುವ ಬಗ್ಗೆ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಫೆ. 21 ರಂದು ಮುಂಜಾನೆ 5-30 ಗಂಟೆಯಿಂದ 10-30 ಗಂಟೆಯ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2022 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಣ್ಣಿಗೇರಿ ಪುರಸಭೆ ಚುನಾವಣೆ: ಮೂರು ದಿನ ಮದ್ಯ ಬ್ಯಾನ್!!

eNewsLand Team

ಕುಡಿವ ನೀರಿಗೆ ಮೀಟರ್ ಅಳವಡಿಕೆಗೆ ವಿರೋಧಿಸಿ ದುಮ್ಮವಾಡದಲ್ಲಿ ಪ್ರತಿಭಟನೆ

eNewsLand Team

ಮೇ 13ರ ಬೆಳಗ್ಗೆ 8 ಗಂಟೆಯಿಂದ  ಮತ ಎಣಿಕೆ ಆರಂಭ ; ಮತ ಎಣಿಕಾ ಕೇಂದ್ರಕ್ಕೆ 375 ಸಿಬ್ಬಂದಿ ನಿಯೋಜನೆ

eNEWS LAND Team