27 C
Hubli
ಮಾರ್ಚ್ 4, 2024
eNews Land
ಜಿಲ್ಲೆ

ಧಾರವಾಡ: ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಸಿಬ್ಬಂದಿ ಯಾರು ಗೊತ್ತಾ?

ಇಎನ್ಎಲ್ ಧಾರವಾಡ :ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 10 ಜನ ರಾಜ್ಯಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ 2020-21 ನೇ ಸಾಲಿನ ಜಿಲ್ಲಾ ಮಟ್ಟದ ನೌಕರರ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಗೆ ಭಾಜನರಾದ ಸಮಾಜ ಕಲ್ಯಾಣ ಜಂಟಿನಿರ್ದೇಶಕ ಡಾ. ಎನ್.ಆರ್. ಪುರುಷೋತ್ತಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಸುಜಾತಾ ಹಸವಿಮಠ, ಡಾ. ಎಸ್.ಎಮ್. ಹೊನಕೇರಿ, ಕಿಮ್ಸ್‍ನ ಡಾ. ಲಕ್ಷ್ಮೀಕಾಂತ ಲೋಕರೆ ಡಾ. ರಾಜಶೇಖರ ದ್ಯಾಬೇರಿ, ಡಾ .ಈಶ್ವರ ಹಸಬಿ, ಡಿಮ್ಹಾನ್ಸ್‍ನ ಡಾ .ರಾಘವೇಂದ್ರ ನಾಯಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಅನ್ನಪೂರ್ಣ ಸಂಗಳದ, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡ್ರ, ವಾರ್ತಾ ಸಹಾಯಕ ಡಾ. ಸುರೇಶ ಹಿರೇಮಠ ಅವರನ್ನು ಸಚಿವರು ಹಾಗೂ ಗಣ್ಯರು ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಿಲ್ಲೆಯ ಡಾ.ಎಸ್.ಆರ್. ರಾಮನಗೌಡರ, ಮಹೇಂದ್ರ ಸಿಂಘಿ, ಡಾ.ವೇದವ್ಯಾಸ ದೇಶಪಾಂಡೆ ಅವರನ್ನು ಗೌರವಿಸಲಾಯಿತು.

Related posts

ಏ.25 ರಂದು ಅಂಚಟಗೇರಿ ಸುತ್ತ-ಮುತ್ತ ವಿದ್ಯುತ್ ವ್ಯತ್ಯಯ!!

eNEWS LAND Team

ಹಿಜಾಬ್ ನಿರ್ಬಂಧ ಖಂಡಿಸಿ ಹುಬ್ಬಳ್ಳಿಯಲ್ಲಿ ಅಂಜುಮನ್ ಸಂಸ್ಥೆ ಬೃಹತ್ ಪ್ರತಿಭಟನೆ

eNewsLand Team

ವಾಕರಸಾಸಂ: ಇಂಧನ ಉಳಿತಾಯದಲ್ಲಿ ಕಾರ್ಯಕ್ಷಮತೆ ತೋರಿದವರಿಗೆ ಪ್ರಶಸ್ತಿ ಪ್ರದಾನ

eNewsLand Team