27 C
Hubli
ಮಾರ್ಚ್ 4, 2024
eNews Land
ಜಿಲ್ಲೆ

ಡಾ.ಬಿ.ಆರ್‌.ಅಂಬೇಡ್ಕರ್ ಅವರ ವಿದೇಶಾಂಗ ನೀತಿ ವಿಚಾರಗಳು ಕೃತಿ ಲೋಕಾರ್ಪಣೆ

ಶಿಕ್ಷಕರನ್ನು ಚಿಂತಕನ್ನಾಗಿ ರೂಪಿಸಲು ಉನ್ನತ ಶಿಕ್ಷಣ ಅಕಾಡೆಮಿ ಪ್ರಯತ್ನ-ಡಾ.ಎಸ್.ಎಂ.ಶಿವಪ್ರಸಾದ

ಇಎನ್ಎಲ್ ಧಾರವಾಡ: ಭಾರತದ ಇತಿಹಾಸವು ಬ್ರಿಟಿಷ್ ಆಡಳಿತ ಕಾಲದಲ್ಲಿ ಅನೇಕ ರಾಜಕೀಯ,ಸಾಮಾಜಿಕ ಚಿಂತಕರನ್ನು ವಿಶ್ವಮಾನ್ಯರನ್ನಾಗಿ ಸೃಷ್ಟಿಸಿದೆ.ಸ್ಚಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಇಂತಹ ತಜ್ಞರು ನಿರೀಕ್ಷಿತ ಪ್ರಮಾಣದಲ್ಲಿ ಹೊರಬರುತ್ತಿಲ್ಲ.ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯು ಉಪನ್ಯಾಸಕರನ್ನು ಸಂಶೋಧನೆ,ಚಿಂತನೆಗಳು ಸೇರಿದಂತೆ ಬಹು ಆಯಾಮಗಳಲ್ಲಿ ರೂಪಿಸಲು ಪ್ರಯತ್ನಿಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಎಸ್.ಎಂ.ಶಿವಪ್ರಸಾದ ಹೇಳಿದರು.

ಧಾರವಾಡ ಕವಿವಿ ಆವರಣದ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ಇಂದು(ಜ.29) ಜರುಗಿದ ಕೊಪ್ಪಳದ ಡಾ.ಪ್ರಭುರಾಜ ಕೆ.ನಾಯಕ ಅವರು ರಚಿಸಿದ “ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾರತದ ವಿದೇಶಾಂಗ ನೀತಿಯ ವಿಚಾರಗಳು” ಕೃತಿಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ಕಲಿಕೆ ಮತ್ತು ಬೋಧನಾ ಮಟ್ಟಗಳು ವಿಸ್ತರಣೆಯಾಗಬೇಕು.ಜಾಗತಿಕ ಮಟ್ಟದಲ್ಲಿ ಅವುಗಳನ್ನು ರೂಢಿಸಿಕೊಳ್ಳಬೇಕು‌ ಎಂದರು

ಪ್ರೊ.ಎಸ್.ಎಸ್.ಪಟಗುಂದಿ ಮಾತನಾಡಿ, ಲೇಖಕ ಡಾ.ಪ್ರಭುರಾಜ ನಾಯಕ ಅವರಲ್ಲಿ ಕಲಿಕೆಯ ದಾಹ, ಅಧ್ಯಯನದ ಶ್ರದ್ಧೆ ತೀವ್ರವಾಗಿದೆ. ಇಂಗ್ಲೀಷ್ ಮೂಲದ ಆಕರಗಳನ್ನು ಬಳಸಿಕೊಂಡು, ಕನ್ನಡದಲ್ಲಿ ಕೃತಿಗಳನ್ನು ಹೊರತರುವುದು ಇಂದು ಬಹಳ ಅಗತ್ಯವಾಗಿದೆ. ಇಂದು ಬಿಡುಡೆಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿದೇಶಾಂಗ ನೀತಿಗಳ ಕುರಿತು ಅನೇಕ ನೋಟಗಳನ್ನು ,ದೃಷ್ಟಿಕೋನಗಳ ಮೇಲೆ ಬೆಳಕು ಚೆಲ್ಲಿದ ವಿಭಿನ್ನ ಮತ್ತು ವಿಶಿಷ್ಟ ಕೃತಿಯಾಗಿದೆ.ಇದುವರೆಗೆ ಯಾರೂ ಮಾಡದ ಕಾರ್ಯ ಮಾಡಿದರೆ ಅದು ಮತ್ತೊಬ್ಬರಿಗೆ ಸ್ಫೂರ್ತಿ, ಪ್ರೇರಣೆಯಾಗಿದೆ .ನೆಹರೂ ಅವರ ವಿದೇಶಾಂಗ ನೀತಿಯನ್ನು ಅಂಬೇಡ್ಕರ್ ಅವರು ವಿಮರ್ಶಾತ್ಮಕವಾಗಿ ಚರ್ಚಿಸುತ್ತಿದ್ದರು.ಪ್ರಜಾಪ್ರಭುತ್ವ ಹಾಗೂ ಕಮ್ಯೂನಿಸಂ ಒಂದೇ ರೀತಿಯಾಗಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ಅಂಬೇಡ್ಕರ್ ಅವರು ಆಗಲೇ ಹೇಳಿದ್ದರು. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.ಸಮಾಜಕ್ಕೆ ಸೇವೆ ಮಾಡುವವನೇ ದೊಡ್ಡ ವ್ಯಕ್ತಿ‌ .ಇತರರ ನಿಲುವು,ಅಭಿಪ್ರಾಯಗಳನ್ನು ಗೌರವಿಸುವ,ಮನ್ನಣೆ ಕೊಡುವ ಪ್ರವೃತ್ತಿ ರಾಜಕಾರಣದಲ್ಲಿ ಇರಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು .ಇಂತಹ ಅನೇಕ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ ಎಂದರು.

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠ ಮಾತನಾಡಿ, ಬಾಯಾರಿದವರಿಗೆ ಕುಡಿಯಲು ನೀರು ಕೊಡದ, ಹೊಟೇಲಿನಲ್ಲಿ ಚಹ ನೀಡದ, ಕ್ಷೌರ ಮಾಡಲು ನಿರಾಕರಿಸುವಂತಹ , ಅಸ್ಪೃಶ್ಯತೆ ಆಚರಣೆಗಳು ಭಾರತದಲ್ಲಿ ಆಚರಣೆಯಲ್ಲಿದ್ದವು, ಡಾ.ಬಿ.ಆರ್.ಅಂಬೇಡ್ಕರ್ ಅವರು ಆ ಎಲ್ಲ ಅಡೆತಡೆಗಳನ್ನು ಮೀರಿ ದೇಶಕ್ಕೆ ದಾರಿದೀಪವಾಗಿರುವ ಸಂವಿಧಾನ ನೀಡಿದ್ದಾರೆ.ಅವರ ವಿದೇಶಾಂಗ ನೀತಿಯ ವಿಚಾರಗಳ ಕುರಿತು ಕೃತಿ ಹೊರ ಬಂದಿರುವುದು ಸಂತಸದ ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು ದೂರದೃಷ್ಟಿ ಹಾಗೂ ರಾಷ್ಟ್ರದ ಹಿತಾಸಕ್ತಿಯಿಂದ ಕೂಡಿವೆ.ಎಲ್ಲ ಕಾಲಕ್ಕೂ ಅವು ಪ್ರಸ್ತುತವಾಗಿವೆ.ಅವರ ವಿದೇಶಾಂಗ ನೀತಿಯ ಕುರಿತು ಕನ್ನಡದಲ್ಲಿ ಗ್ರಂಥಗಳು ಹೊರ ಬಂದಿರುವುದು ಸಂತಸ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಬಿ.ಎಫ್.ಪಾಟೀಲ, ಪ್ರೊ.ಎ.ಆರ್.ಜಗತಾಪ, ಸುಧಾ ಹೆಗಡೆ, ಪ್ರೊ.ಪ್ರಭುರಾಜ ಕೆ‌.ನಾಯಕ ಮತ್ತಿತರರು ವೇದಿಕೆಯಲ್ಲಿದ್ದರು.

ಮಧುಸೂಧನ ಕಾರ್ಯಕ್ರಮ ನಿರೂಪಿಸಿದರು. ಕೆ.ದಿವಾಕರ್ ವಂದಿಸಿದರು.

Related posts

ಹುಬ್ಬಳ್ಳಿಗೂ ಕಾಲಿಟ್ಟ ಹಿಜಾಬ್ ವಿವಾದ: ಪ್ರತಿಭಟನೆ

eNewsLand Team

ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ ವಿಕಲಚೇತನರ ಹಾಗೂ 80 + ವಯಸ್ಸಾದವರ ಮನೆಗೆ ಏ.29,30 ಹಾಗೂ ಮೇ 1 ರಂದು ಚುನಾವಾಣಾ ಸಿಬ್ಬಂದಿ ಭೇಟಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

eNEWS LAND Team

ಹುಬ್ಬಳ್ಳಿ ಧಾರವಾಡ ಮಾದರಿ‌ ನಗರವಾಗಿ ಮಾಡುವತ್ತ ಪಣ: ಕೇಂದ್ರ ಸಚಿವ ಜೋಶಿ

eNewsLand Team