eNews Land
ಜಿಲ್ಲೆ

ಧಾರವಾಡ: ಡಾಟಾ ಎಂಟ್ರಿ ಅಪರೇಟರ್ ಆಗಲು ಇಲ್ಲಿದೆ ಅವಕಾಶ!!

Listen to this article

ಇಎನ್ಎಲ್ ಧಾರವಾಡ : ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸಲು ಒಬ್ಬ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ಜಿಲ್ಲಾ ಮಟ್ಟದಲ್ಲಿ ಏಜೆನ್ಸಿಯವರ ಮೂಲಕ ಭರ್ತಿ ಮಾಡಲು ಉದ್ದೇಶಿಸಿದೆ.

ಸಂಸ್ಥೆಯು ನೋಂದಾಗಿ ಮೂರು ವರ್ಷಗಳನ್ನು ಪೂರೈಸಿದ ಬಗ್ಗೆ ದಾಖಲೆ, ಸಂಸ್ಥೆಯು ಈಗಾಗಲೇ ಸರ್ಕಾರಿ ಕಚೇರಿ ಅಥವಾ ಖಾಸಗಿ ಸಂಸ್ಥೆ ಕಚೇರಿಗೆ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಅಪರೇಟರ್ ಇವರನ್ನು ಪೂರೈಸಿದ ಬಗ್ಗೆ ದಾಖಲೆಗಳು, ಇಎಸ್‍ಐ, ಪಿಎಫ್ ಚಾಲ್ತಿಯಲ್ಲಿರುವ ಬಗ್ಗೆ ದಾಖಲೆಗಳು, ಕನಿಷ್ಠ ವೇತನ ಕಾಯ್ದೆಯನ್ವಯ ದರಪಟ್ಟಿ ಸಲ್ಲಿಸಬೇಕು.

ಆಸಕ್ತ ನೋಂದಾಯಿತ ಏಜೆನ್ಸಿಯವರು ತಮ್ಮ ಸೇವಾ ಶುಲ್ಕದ ದರಪಟ್ಟಿಯನ್ನು ಫೆ.9 ರಂದು ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಗೊಳಿಸಲು ತಹಶೀಲ್ದಾರ್ ಪ್ರಕಾಶ ನಾಶಿ ಕರೆ

eNewsLand Team

ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ನೋಡಿ? ಮತ ಎಣಿಕೆ ಸ್ಥಳ: ಧಾರವಾಡ ಕೃಷಿ ವಿಶ್ವವಿದ್ಯಾಲಯ

eNEWS LAND Team

ಹುಬ್ಬಳ್ಳಿಯಲ್ಲಿ ಪಂಜಾಬ್ ಸಿಎಂ ಚರಂಜಿತ್ ಶವಯಾತ್ರೆ!!

eNewsLand Team