23 C
Hubli
ಸೆಪ್ಟೆಂಬರ್ 25, 2023
eNews Land
ಜಿಲ್ಲೆ

ಅಕ್ಟೋಬರ್ 21 ರಂದು ಹುಬ್ಬಳ್ಳಿಯಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮ

ಅಕ್ಟೋಬರ್ 21 ರಂದು ಹುಬ್ಬಳ್ಳಿಯಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮ

ಇ ಎನ್ ಎಲ್

ಹುಬ್ಬಳ್ಳಿ:  ಅ.18:

75 ನೇ ವರ್ಷದ ಸ್ವಾತಂತ್ರ್ಯ ವರ್ಷ ವನ್ನು “ಆಜಾದಿ ಕಾ ಅಮೃತ್ ಮಹೋತ್ಸವ್” ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲು ಪ್ರಧಾನ ಮಂತ್ರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಅಗ್ರಣೀಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಹಾಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳ
ಸಹಯೋಗದಲ್ಲಿ ಅಕ್ಟೋಬರ್ 21 ರಂದು ಬೆಳಿಗ್ಗೆ 10.30 ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾರ್ವಜನಿಕ,ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಡಿಸಿಸಿಬಿಗಳು, ಎಂಎಫ್‌ಐಗಳು, ಎನ್‌ಬಿಎಫ್‌ಸಿಗಳು, ನಬಾರ್ಡ್,ಕೆವಿಐಸಿ, ಕೆವಿಐಬಿ ಮತ್ತು ಡಿಐಸಿಯಂತಹ ಇತರ ಸರ್ಕಾರಿ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಲಭ್ಯವಿರುವ ವಿವಿಧ ಸೆವೆಗಳ ಹಾಗು ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಾಲದ ಅರ್ಜಿಗಳನ್ನು ಸ್ವೀಕರಿಸಿ, ಮಂಜೂರಾತಿ ಅಥವಾ ತಾತ್ವಿಕವಾಗಿ ಮಂಜೂರಾತಿ ಪತ್ರಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ.

ಗ್ರಾಹಕ ಸಂಪರ್ಕ ಕಾರ್ಯಕ್ರಮದಲ್ಲಿ ಪಿಎಂಎಂವೈ (ಮುದ್ರಾ), ಸ್ಟ್ಯಾಂಡ್ ಅಪ್ ಇಂಡಿಯಾ, ಪಿಎಂ ಸ್ವನಿಧಿ, ಇಸಿಎಲ್‌ಜಿಎಸ್, ಪಿಎಂಇಜಿಪಿ, ಕೃಷಿ ಮೂಲಸೌಕರ್ಯ ನಿಧಿ ಯೋಜನೆ (ಎಐಎಫ್), ಪಶು ಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆ (ಎಎಚ್‌ಐಡಿಎಫ್), ಕೃಷಿ, ಎಂಎಸ್‌ಎಂಇ, ಚಿಲ್ಲರೆ, ಶಿಕ್ಷಣ, ವಸತಿ ಸಾಲಗಳು ಮತ್ತು ಇತರ ಆತ್ಮನಿರ್ಭರ ಭಾರತ್ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು.
ಜೊತೆಗೆ
ಪಿಎಂಎಸ್‌ಬಿವೈ, ಪಿಎಂಜೆಜೆಬಿವೈ, ಎಪಿವೈ ನಂತಹ ವಿವಿಧ ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಗಳ ಬಗ್ಗೆ ವಿಶೇಷ ಜಾಗೃತಿ ಅಭಿಯಾನವನ್ನು ನಡೆಸಲಾಗುವುದು.

ಜಿಲ್ಲೆಯ ಸಾರ್ವಜನಿಕರು ಹಾಗೂ ಗ್ರಾಹಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಬ್ಯಾಂಕ್ ಆಫ್ ಬರೋಡ ಕ್ಷೇತ್ರಿಯ ಮುಖ್ಯಸ್ಥರಾದ ಎಮ್. ಚಕ್ರವರ್ತಿ ಹಾಗು ಜಿಲ್ಲಾ ಅಗ್ರಣೀಯ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಆರ್.ಅಣ್ಣಯ್ಯ ಕೋರಿದ್ದಾರೆ

Related posts

ಸಂಜೆ 6 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ.71.76 ರಷ್ಟು ಮತದಾನ; 6 ಗಂಟೆ ನಂತರವೂ ಕೆಲ ಮತಗಟ್ಟೆಗಳಲ್ಲಿ ಮುಂದುವರಿದಿರುವ ಮತದಾನ…

eNEWS LAND Team

ಅತಿವೃಷ್ಟಿ ಹಾನಿ : ಪರಿಹಾರ ಮೊತ್ತ ಹೆಚ್ಚಿಸಿ ಆದೇಶ; ಹಾಲಪ್ಪ ಆಚಾರ್

eNewsLand Team

ಮಹಾನಗರ ಪಾಲಿಕೆ ವ್ಯಾಪ್ತಿಯ 2.81 ಲಕ್ಷ ಆಸ್ತಿಗಳ ಇ- ಸ್ವತ್ತು ನೋಂದಣಿಗೆ ಕ್ರಮ

eNewsLand Team