36.8 C
Hubli
ಮಾರ್ಚ್ 29, 2024
eNews Land
ಜಿಲ್ಲೆ

ಅನುಭವ ಮಂಟಪ ಯುವ ಪೀಳಿಗೆಗೆ ಆದರ್ಶದ ಮಂದಿರವಾಗಲಿದೆ : ಮುಖ್ಯಮಂತ್ರಿ  ಬೊಮ್ಮಾಯಿ

ಇಎನ್ಎಲ್ ಚಿಕ್ಕಮಗಳೂರು:

ಬಸವ ಕಲ್ಯಾಣದಲ್ಲಿ ನಿರ್ಮಾಣವಾಗಲಿರುವ ನಿಜವಾದ ಅನುಭವ ಮಂಟಪ ಯುವ ಪೀಳಿಗೆಗೆ ಆದರ್ಶದ ಮಂದಿರವಾಗಲಿದೆ. ರಾಜ್ಯ ಸರ್ಕಾರ ಅರ್ಥಪೂರ್ಣ ಅನುಭವ ಮಂಟಪ ನಿರ್ಮಾಣದ ಆಶಯ ಹೊಂದಿದ್ದು, ಜೂನ್ ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಶ್ರೀ *ಬಸವತತ್ತ್ವ ಪೀಠ (ರಿ) ಹಾಗೂ ಶ್ರೀ* *ಬಸವ ಮಂದಿರ,* *ಕಲ್ಯಾಣನಗರ ಚಿಕ್ಕಮಗಳೂರು* ಇವರ ವತಿಯಿಂದ *ಲಿಂ *.* ಶ್ರೀ* *ಮ.ನಿ.ಪ್ರ ಚಂದ್ರಶೇಖರ* *ಮಹಾಸ್ವಾಮೀಜಿ ಅವರ* *167ನೇ ಜಯಂತಿ* ಮತ್ತು ಲಿಂ. ಶ್ರೀ. ಮ.ನಿ.ಪ್ರ ಜಯ ಚಂದ್ರಶೇಖರ ಮಹಾಸ್ವಾಮೀಜಿ ಅವರ 26ನೇ ಸಂಸ್ಮರಣೆ ಅಂಗವಾಗಿ ಶ್ರೀಮಠದ *ಜೆಸಿಎಸ್ ಶಾಲಾ ಆವರಣ* ಆಯೋಜಿಸಲಾಗಿರುವ “ *ಬಸವತತ್ತ್ವ ಸಮಾವೇಶದಲ್ಲಿ* ಪಾಲ್ಗೊಂಡು *ಕಾರ್ಯಕ್ರಮವನ್ನುದ್ದೇಶಿಸಿ* ಮಾತನಾಡಿದರು.

ಅನುಭವ ಮಂಟಪ ಕಟ್ಟಡದಲ್ಲಿ ಅಲ್ಲ. ಅನುಭವದ ತತ್ವಗಳಲ್ಲಿ ಇದೆ. ಅನುಭವ ಮಂಟಪವನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಎರಡರಿಂದ ಮೂರು ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು ತಿಳಿಸಿದರು.

ಕಾಯಕದಲ್ಲಿ ಸ್ವರ್ಗವನ್ನು ಕಾಣು ಎಂಬ ಉದಾತ್ತ ಚಿಂತನೆ 12ನೇ ಶತಮಾನದಲ್ಲಿಯೇ ಇತ್ತು. ಯಾವುದೇ ಜಟಿಲವಾದ ಸಮಸ್ಯೆಗಳಿಗೆ ವಚನಗಳಲ್ಲಿ ಉತ್ತರವಿದೆ. ದೇಶಕ್ಕೆ ದೊಡ್ಡ ಚರಿತ್ರೆ ಇದೆ. ಚಾರಿತ್ರ್ಯ ಬೇಕು. ಪಾಪಪುಣ್ಯಗಳ ಪ್ರಜ್ಞೆ ಇರಬೇಕು. ಬಸವ ತತ್ವಗಳ ಆಚರಣೆ ಮುಖ್ಯ. ನಮ್ಮ ಸಂಸ್ಕಾರವನ್ನು ಸರಿಪಡಿಸಿಕೊಂಡರೆ ನಮ್ಮ ಸಂಸ್ಕೃತಿಯೂ ಸರಿಯಾಗುತ್ತದೆ. ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಸವಣ್ಣನವರ ಮೊದಲ ಸಂಸತ್ತು ಅನುಭವ ಮಂಟಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೂ ಮಾತನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶ್ರೀ ಮಠವನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ಆದರೆ ತತ್ವಗಳು ಸರ್ವಶಕ್ತವಾಗಿರುತ್ತವೆ. ಭಕ್ತರಲ್ಲಿ ಆ ಭಾವ ಬೆಳೆದು, ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆ, ಸಂಸ್ಕಾರ ಉಳಿಯುತ್ತವೆ ಎನ್ನುವ ಕಾರಣದಿಂದ ಹಲವಾರು ಮಠಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ನಿಪ್ಪಾಣಿಯಿಂದ ಹಿಡಿದು ಕೊಳ್ಳೇಗಾಲದವರೆಗೆ ಸ್ವತಂತ್ರಪೂರ್ವದಿಂದ ಶ್ರೀ ಮಠಗಳು ಮಾಡಿರುವ ಸೇವೆ ಆಧ್ಯಾತ್ಮಿಕವಾಗಿ ಶೈಕ್ಷಣಿಕವಾಗಿ, ದಾಸೋಹದಲ್ಲಿ ಮುಂಚೂಣಿಯಲ್ಲಿವೆ. ಪ್ರಮುಖ ಮಠಗಳು ಮಾಡಿದಷ್ಟೇ ಕೆಲಸವನ್ನು ಹಳ್ಳಿಯಲ್ಲಿ ಸಣ್ಣ ಸಣ್ಣ ಮಠಗಳು ಮಾಡಿವೆ. ದಾಸೋಹ, ಸಂಸ್ಕಾರ ನೀಡಿ ಕನ್ನಡ ನಾಡಿಗೆ ಸಂಸ್ಕಾರ, ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದೊಂದು ರೀತಿಯಲ್ಲಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮಾಡುವಂಥ ಚಳವಳಿ. ಇದು ನಿರಂತರವಾಗಿ ನಡೆಯುತ್ತಿದೆ. ಇಡೀ ಕನ್ನಡ ನಾಡಿನ ಭವಿಷ್ಯ ಶ್ರೀ ಮಠದ ಕಾಯಕ ಆಶೀರ್ವಾದ ದಲ್ಲಿದೆ. ಈ ಬಸವತತ್ವ ಸಮಾವೇಶದಿಂದ ಶುದ್ಧೀಕರಣ ಕಾರ್ಯವಾಗುತ್ತಿರಬೇಕು. ಶ್ರೀಗಳ ಸೇವಾ ಕಾರ್ಯಗಳಿಂದ ಬಡವರಿಗೆ, ದೀನದಲಿತರಿಗೆ, ದುರ್ಬಲ ವರ್ಗದವರಿಗೆ ಶಕ್ತಿ ತುಂಬುವಂತಾಗಲಿ ಎಂದರು.

Related posts

ಬಾರದ 108: ವ್ಯಕ್ತಿ ಸಾವಿಗೆ ಕಲಘಟಗಿ ಆಸ್ಪತ್ರೆ ಎದುರು ಆಕ್ರೋಶ, ಪ್ರತಿಭಟನೆ

eNewsLand Team

30 ವರ್ಷ: ಅಮ್ಮಿನಭಾವಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವ

eNewsLand Team

ಹುಬ್ಬಳ್ಳಿಯಲ್ಲಿ ಪಂಜಾಬ್ ಸಿಎಂ ಚರಂಜಿತ್ ಶವಯಾತ್ರೆ!!

eNewsLand Team