27 C
Hubli
ಮೇ 25, 2024
eNews Land
ಸಂಸ್ಕೃತಿ

ಪೌರಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಇಎನ್‌ಎಲ್‌ ಅಣ್ಣಿಗೇರಿ: ಪೌರ ಸೇವಾ ನೌಕರರು ಸರ್ಕಾರ ಸೇವಾ ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿದ್ದು, ಸಂಘದ ಮುಖಾಂತರ ಹೋರಾಟ. ಪ್ರತಿಭಟನೆ, ನ್ಯಾಯಸಮ್ಮತ ಬೇಡಿಕೆ ಪೂರೈಸುವಲ್ಲಿ ಸಂಘ ಬಲಿಷ್ಠವಾಗಿ ಬೆಳೆಯಬೇಕಿದೆ. ಪೌರ ನೌಕರರು ಸಂಘಕ್ಕೆ ಬೆಂಬಲ ಕೊಡುವ ಮೂಲಕ ಸನ್ನದ್ದರಾಗಬೇಕೆಂದು ರಾಜ್ಯ ಸಂಘದ ಕಾರ್ಯದರ್ಶಿ ಎಸ್.ಸಿ.ಹುಣಸಿಮರದ ವಿನಂತಿಸಿದರು. ಪಟ್ಟಣದ ಪಂಪ ಸ್ಮಾರಕ ಭವನದಲ್ಲಿ ಜರುಗಿದ ಧಾರವಾಡ ಜಿಲ್ಲೆಯ ಪೌರ ಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು

ಕೊಪ್ಪಳ ಜಿಲ್ಲಾ ಅಧ್ಯಕ್ಷ ಲಾಲುಸಾಬ ಮನಿಯಾರ ಡಿ ಗ್ರೇಡ್ ಮತ್ತು ಸಿ ಗ್ರೇಡ್ ಪೌರ ಸೇವಾ ನೌಕರರು ಜಿಲ್ಲಾ ಸಂಘದ ಮೂಲಕ ರಾಜ್ಯ ಸಂಘಕ್ಕೆ ಬೆಂಬಲ ನೀಡುವುದರಿಂದ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಆ ಹಿನ್ನಲೆಯಲ್ಲಿ ತಾವೆಲ್ಲಾ ಸಹಕಾರ ಸಹಾಯ ನೀಡಬೇಕೆಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ವಿ.ಡಿ.ರಾಮಗಿರಿ ಮಾತನಾಡಿ, ಧಾ.ಜಿ.ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು ನಿವೃತರಾದ ಪ್ರಯುಕ್ತ  ಧಾ.ಜಿ.ಪೌಸೇ ನೌಕರರ ಸಂಘದ ನೂತನ ಪದಾಧಿಕಾರಿಗಳು ಅವರ ಅನುಭವ ಮಾರ್ಗದರ್ಶನ ಪಡೆಯಬೇಕು. ಹಿರಿಯ ಪೌರಸೇವಾ ನೌಕರರ ಸಲಹೆ ಸೂಚನೆಗಳನ್ನು ಕೇಳಬೇಕು. ಪೌರ ಸೇವಾ ನೌಕರರನ್ನು  ವಿಶ್ವಾಸಕ್ಕೆ ಪಡೆದು ಸಂಘಟನಾತ್ಮಕವಾಗಿ ಸಂಘ ಬೆಳಿಸಿ ರಾಜ್ಯ ಸಮಿತಿ ಆದೇಶ ಪ್ರಕಾರ ಕಾರ್ಯಚಟುವಟಿಕೆ ಮಾಡಬೇಕು. ರಾಜ್ಯ ಸಮಿತಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಬಡ್ತಿ, ಖಾಯಂ ಗೊಳಿಸುವಲ್ಲಿ ಇನ್ನೀತರ ಪ್ರಮುಖ ಬೇಡಿಕೆಗೆ ಹೋರಾಟ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಆಗ್ರಹ ಮಾಡಬೇಕಿದೆ
ಸಂಘದ ಪ್ರತಿಯೊಬ್ಬರು ಸಶಕ್ತ ಬದುಕಿಗೆ ಬೆಳಕು ಚೆಲ್ಲುವ ಕಾರ್ಯ ರಾಜ್ಯ ಸಂಘ ಮಾಡುಲಾಗುತ್ತಿದೆ. ಆ ಹಿನ್ನಲೆಯಲ್ಲಿ ಇನ್ನೆರಡು ತಿಂಗಳಲ್ಲಿ ರಾಜ್ಯ ಮಟ್ಟದ ಸೇವಾ ನೌಕರರ ಸಂಘದ ಸಭೆಯನ್ನು ಅಣ್ಣಿಗೇರಿಯಲ್ಲಿ ಆಯೋಜಿಸುವ ನಿರ್ಣಯ ಕೈಗೊಂಡಿದ್ದರಿoದ ಧಾ.ಜಿ.ಪೌರ ಸೇವಾ ನೌಕರರ ಸೇವಾ ಸಮಿತಿ ಸೂಚನೆ ಮೇರೆಗೆ ಸಭೆಯಲ್ಲಿ ಸಂಪೂರ್ಣ ಸಹಕಾರದೊಂದಿಗೆ ನೌಕರರ ಸಮಸ್ಯೆಗಳನ್ನು ಆಲಿಸಿ ತಿರ್ಮಾನ ಕೈಗೊಳ್ಳಲಾಗುವುದೆಂದು ಹೇಳಿದರು.
ಧಾರವಾಡ ಜಿಲ್ಲಾ ಪೌರ ಸೇವಾ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶಾನೂರಸಾಬ ನಾಶುಪುಡಿ, ಉಪಾಧ್ಯಕ್ಷರಾಗಿ ಶಿವಾನಂದ ಕದಂ, ಕಾರ್ಯದರ್ಶಿಯಾಗಿ ಐ.ಎಂ ಪಠಾಣ, ಖಚಾಂಜಿಯಾಗಿ ಸಂತೋಷ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ವ್ಹಿ.ಎಸ್.ನಾರಾಯಣಕರ, ಕಾನೂನು ಸಲುಹೆಗಾರರಾಗಿ ಎಸ್.ಪಿ.ಪೂಜಾರ, ರಾಜ್ಯ ಪರಿಷತ್ ಸದಸ್ಯರಾಗಿ ಪವಿತ್ರಾ ತಮಗುಂಟಿ ಅವರನ್ನು ರಾಜ್ಯ ಸಮಿತಿ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಿದರು.

ಮಾಜಿ ಧಾರವಾಡ ಜಿಲ್ಲಾ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ವಿ.ಎಸ್.ಬಣಗಾರ ಪ್ರಾಸ್ತವಿಕವಾಗಿ ಸಂಘದ ಧ್ಯೇಯ, ಉದ್ದೇಶ, ಸಾಧನೆ, ಪೌರ ನೌಕರರ ಬಾಳಿಗೆ ಬೆಳಕು ಚೆಲ್ಲಿದ ಬಗ್ಗೆ ರಾಜ್ಯ ಕಮಿಟಿ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ ಕೈಗೊಂಡ ಸಾಧನೆ ಕುರಿತು ವಿಸ್ತಾರವಾಗಿ ಮಾತನಾಡಿದರು.
ಧಾರವಾಡ ಜಿಲ್ಲಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು ರಾಜ್ಯ ಸಮಿತಿ ಪದಾಧಿಕಾರಿಗಳನ್ನು ಹಾಗೂ ಕೊಪ್ಪಳ, ಬೆಳಗಾವಿ,ಜಿಲ್ಲಾ ಅಧ್ಯಕ್ಷರನ್ನು ಮತ್ತು ಧಾರವಾಡ ಜಿಲ್ಲೆಯ ಶಾಖೆಗಳ ಕುಂದಗೋಳ ನವಲಗುಂದ, ಅಣ್ಣಿಗೇರಿ, ಕಲಘಟಗಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಪೂಜಾರ, ಆರ್.ಎ.ಭರಮನ್ನವರ ಫಕ್ಕಿರಪ್ಪ ಚೂರಿ, ಬಸವರಾಜ ರಾಮಗೇರಿ,ಸಂತೋಷ ಕಟ್ಟಿಮನಿ, ಬಸವರಾಜ ಕರೆಕಲ್ಲಣ್ಣವರ, ವಿ.ಎಸ್.ಬಣಗಾರ, ಕೆ.ಎಸ್.ಬಾಳೋಜಿ, ಧಾರವಾಡ ಜಿಲ್ಲೆಯ ಎಲ್ಲಾ ಪೌರ ಸೇವಾ ನೌಕರರು ಉಪಸ್ಥಿತರಿದ್ದರು. 

Related posts

ರಂಗಗೀತೆ, ನಾಟಕ ಪ್ರದರ್ಶನ ಕಲಾವಿದರಿಗೆ ದುತ್ತರಗಿ ಪ್ರಶಸ್ತಿ

eNEWS LAND Team

ಬಂಜಾರ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಅಗತ್ಯ ನೆರವು: ಸಿಎಂ ಬೊಮ್ಮಾಯಿ

eNEWS LAND Team

 ಅಂತರಾತ್ಮದ ಚರಿತ್ರೆ ರಾಮಾಯಣ

eNEWS LAND Team