23 C
Hubli
ನವೆಂಬರ್ 28, 2022
eNews Land
ಸಂಸ್ಕೃತಿ

ಮೈಸೂರಿನಲ್ಲಿ ಶಾಶ್ವತ ವಸ್ತುಪ್ರದರ್ಶನಕ್ಕೆ ಚಿಂತನೆ: ಸಿ.ಎಂ

Listen to this article

ಇಎನ್ಎಲ್

ಮೈಸೂರು:ಮೈಸೂರಿನಲ್ಲಿ ಶಾಶ್ವತ ವಸ್ತುಪ್ರದರ್ಶನಕ್ಕೆ ಚಿಂತನೆ: ಸಿ.ಎಂ

ಮೈಸೂರು, ಅಕ್ಟೋಬರ್.16: ಮೈಸೂರಿನ ವಸ್ತುಪ್ರದರ್ಶನ ಮೈದಾನವನ್ನು ವರ್ಷವಿಡೀ ಉಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಾಶ್ವತ ವಸ್ತುಪ್ರದರ್ಶನ ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಮೈಸೂರಿನಲ್ಲಿ ಪ್ರವಾಸೋದ್ಯಮ ಸರ್ಕಿಟ್ ರೂಪಿಸಲು ಸಮಗ್ರ ಚಿಂತನೆ ನಡೆಸಿ ನಿರ್ಣಯವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ಉತ್ತಮ ರೀತಿಯಲ್ಲಿ ದಸರಾ ನಡೆಸಿಕೊಟ್ಟ ಮೈಸೂರಿನ ಜನತೆಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು. ಮುಂಬರುವ ವರ್ಷಗಳಲ್ಲಿ ಪರಿಸ್ಥಿತಿ ಉತ್ತಮಗೊಂಡರೆ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆ ಸಂಬಂದ ನಾಲ್ಕು ದಿನಗಳ ಪ್ರಾಚಾರಕ್ಕೆ ತೆರಳುವುದಾಗಿ ತಿಳಿಸಿದ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Related posts

ಏ. 12, 13ರ ಮಹಾ ರಂಗಪ್ರಯೋಗಕ್ಕೆ ಸಜ್ಜಾಗ್ತಿದೆ ಧಾರವಾಡ ರಂಗಾಯಣ!! ಆ ಫೇಮಸ್ ನಾಟಕ ಯಾವುದು ಗೊತ್ತಾ?

eNewsLand Team

ಕೇಂದ್ರ ಲಲಿತಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಸಂಯೋಜಕರಾಗಿ ಶ್ರೀನಿವಾಸ ಶಾಸ್ತ್ರಿ

eNEWS LAND Team

ಮಾತಾಡ್ ಮಾತಾಡ್ ಕನ್ನಡ ಘೋಷ ವಾಕ್ಯ : ‘ಕನ್ನಡಕ್ಕಾಗಿ ನಾವು’ ಅಭಿಯಾನ

eNEWS LAND Team