27 C
Hubli
ಮಾರ್ಚ್ 28, 2023
eNews Land
ಅಪರಾಧ ಕೃಷಿ ಜಿಲ್ಲೆ

ಅಣ್ಣಿಗೇರಿ; ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣು

Listen to this article

ಇಎನ್ಎಲ್ ವಾರ್ತೆ
ಅಣ್ಣಿಗೇರಿ: ಸಾಲಬಾಧೆ ತಾಳಲಾರದೆ ತಾಲೂಕಿನ ತುಪ್ಪದಕುರಹಟ್ಟಿ ಯುವ ರೈತ ನಿಂಗಪ್ಪ ಬಸಪ್ಪ ಗಾಣಿಗೇರ ( 34 ) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.

ಮೇಣಸಿನ ಬೆಳೆ ಮತ್ತು ಕಡಲಿ ಬೆಳೆಯನ್ನು ಭಿತ್ತನೆ ಮಾಡಿದ್ದು, ಉಳುಮೆ ಮಾಡುವ ಸಲುವಾಗಿ ಹುಲಕೋಟಿಯ ಸಿಂಡಿಕೇಟ್ ಬ್ಯಾಂಕಿನಲ್ಲಿ 5 ಲಕ್ಷ ರೂಪಾಯಿ ಮತ್ತು ಶೆಲವಡಿ ಕೆ.ವ್ಹಿ.ಜಿ ಬ್ಯಾಂಕಿನಲ್ಲಿ 2 ಲಕ್ಷ ರೂಪಾಯಿ ಬೆಳೆಸಾಲ ಮಾಡಿದ್ದಾರೆ. ಇದರ ಬಡ್ಡಿ ಸೇರಿ ಒಟ್ಟು 9 ಲಕ್ಷ ದಿಂದ 10 ಲಕ್ಷ ರೂಪಾಯಿ ಸಾಲ ಆಗಿತ್ತು.
ಈ ಬಾರಿ ಭಿತ್ತನೆ ಮಾಡಿದ ಜಮೀನದಲ್ಲಿನ ಬೆಳೆಯು ಸರಿಯಾಗಿ ಬಾರದೇ ಇರುವುದರಿಂದ ಮೃತನು ತನ್ನಷ್ಟಕ್ಕೆ ತಾನೇ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆ ಹೊಂದಿ ಫೆ.15-ರ ಸಂಜೆ 3ಗಂಟೆಯಿಂದ ಫೆ. 16 ರಂದು ಮುಂಜಾನೆ 6-30 ಗಂಟೆಯ ನಡುವಿನ ಅವಧಿಯಲ್ಲಿ 42/2ಎ ನೇ ಜಮೀನದಲ್ಲಿನ ಬನ್ನಿಯ ಮರಕ್ಕೆ ನೂಲಿನ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 4/2022 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Related posts

ಅತಿವೃಷ್ಟಿ ಹಾನಿ : ಪರಿಹಾರ ಮೊತ್ತ ಹೆಚ್ಚಿಸಿ ಆದೇಶ; ಹಾಲಪ್ಪ ಆಚಾರ್

eNewsLand Team

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

eNewsLand Team

ಸಾಧಿಸುವ ಛಲ, ದೃಢವಾದ ಸಂಕಲ್ಪ, ಸತತ ಪ್ರಯತ್ನ, ಪರಿಶ್ರಮಕ್ಕೆ ಯಶಸ್ಸು ನಿಶ್ಚಿತ

eNEWS LAND Team