ಇಎನ್ಎಲ್ ರಾಯಚೂರು:ದೇವದುರ್ಗ ಪಟ್ಟಣದ ಅಬುಮೊಹಲ್ಲಾ ಜೋಗಿಯರ ಓಣಿಯ ಕೆ.ರಾಮುಲಮ್ಮ ಸುನೀಲ್ (19) ಇದೇ ಫೆ.14ರಂದು ಬೆಳಿಗ್ಗೆ 11 ಗಂಟೆಗೆ ಮನೆ ಬಿಟ್ಟು ಹೋಗಿದ್ದು, ಇಲ್ಲಿಯವವರೆಗೂ ಮರಳಿ ಮನಗೆ ಬಾರದೆ ಕಾಣೆಯಾಗಿದ್ದಾಳೆ, ಈ ಕುರಿತು ದೇವದುರ್ಗ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ ಕಪ್ಪು ಮೈ ಬಣ್ಣ, ದುಂಡು ಮುಖ, 5.3 ಅಡಿ ಎತ್ತರ, ತಲೆಯಲ್ಲಿ ಕಪ್ಪು ಕೂಡಲಿದ್ದು, ಚುಡಿದಾರ, ಪೈಜಾಮ್ ಧರಿಸಿರುತ್ತಾಳೆ. ತೆಲುಗು, ಹಿಂದಿ ಮಾತನಾಡುತ್ತಾಳೆ.
ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08531-260333, ಅಥವಾ ಪಿಎಸ್.ಐ 9480803858 ಗೆ ಸಂಪರ್ಕ ಮಾಡಬಹುದಾಗಿದೆ ಎಂದು ದೇವದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.