ಇಎನ್ಎಲ್ ನವಲಗುಂದ : ತಾಲೂಕಿನ ಬೆಳವಟಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿರುವ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಧಗ ಧಗನೆ ಹೊರಿಯುತ್ತಿರುವ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.
ನರಗುಂದ ಕಡಯಿಂದ ಹುಬ್ಬಳ್ಳಿ ಕಡೆಗೆ ಹೊರಟಿರುವ ಲಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಲಾರಿಯಲ್ಲಿದ್ದ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ನರಗುಂದ ಅಗ್ನಿಶಾಮಕ ದಳ ಹಾಗೂ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಲಾರಿ ಯಾರದು ಎಂಬುದು ತಿಳಿದು ಬಂದಿಲ್ಲ.