ಇಎನ್ಎಲ್ ಹುಬ್ಬಳ್ಳಿ: ರೈಲ್ವೆಯಲ್ಲಿ ಕಳವು ಮಾಡುತ್ತಿದ್ದ ಆರೋಪಿ ಬಂಧಿಸಿರುವ ಹುಬ್ಬಳ್ಳಿ ರೈಲ್ವೆ ಪೊಲೀಸರು ಆತನಿಂದ ಒಟ್ಟು ಮೂರು ಪ್ರಕರಣದಲ್ಲಿ 101 ಗ್ರಾಂ. ಚಿನ್ನಾಭರಣ, ಎಲೆಕ್ಟ್ರಾನಿಕ್ ವಸ್ತು ಸೇರಿ, 5.60ಲಕ್ಷ ರು. ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗೋವಾದ ಮಾಪ್ಸಾ ಮೂಲದ ಹೊಟೆಲ್ ಕೆಲಸ ಮಾಡಿಕೊಂಡಿದ್ದ ಜಾನ್ ಸುಕುರ್ ಸ್ಟೀವನ್ ವಾಜ್ (33) ಬಂಧಿತ. ಈತ ಹುಬ್ಬಳ್ಳಿಯಲ್ಲಿ ರೈಲ್ವೆಯಿಂದ ಇಳಿದು ಅಡ್ಡಾಡುತ್ತಿದ್ದಾಗ ಸಂಶಯಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಆರೋಪಿಯಿಂದ 1.10 ಲಕ್ಷ ರು. ಆ್ಯಪಲ್ ಮ್ಯಾಕ್ ಲ್ಯಾಪ್‌ಟಾಪ್ ಸೇರಿ ಸ್ಯಾಮ್‌ಸಂಗ್ ಮೊಬೈಲ್, ಸ್ಮಾರ್ಟ್ ವಾಚ್, ಆ್ಯಪಲ್ ಐಫೋನ್, ಚಿನ್ನದ ನೆಕ್ಲೆಸ್, ಮಾಂಗಲ್ಯ ಸರ, ಕಿವಿಯೋಲೆ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.