29 C
Hubli
ಅಕ್ಟೋಬರ್ 8, 2024
eNews Land
ಅಪರಾಧ ಸುದ್ದಿ

ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಗಲ್ಲು ಹಾಕಿ ಎಂದು ಆಗ್ರಹ

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ಕುರಬರ ಸಮಾಜ ಭಾಂದವರು ಪಟ್ಟಣದ ಅಮೃತೇಶ್ವರ ಬಯಲಿನಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣ ಹತ್ತಿರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸಮಾವೇಶಗೊಂಡು  ಪ್ರತಿಭಟಿಸುವ ಮೂಲಕ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು.ಬೈಲಹೊಂಗಲ ತಾಲೂಕಿನ ವನ್ನೂರು ಗ್ರಾಮದ ಮಹಿಳೆ ಲಕ್ಷ್ಮಿ ವಿಠ್ಠಲ ಕಳ್ಳಿಮನಿ ಎಂಬ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಕುರಿಗಾಹಿ ಮಹಿಳೆ ಹೊರವಲಯ ಜಮೀನನಲ್ಲಿ ಬೀಡುಬಿಟ್ಟಿದ್ದನ್ನು ಗಮನಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಹೇಯ ಕೃತ್ಯ ಜರುಗಿದ್ದನ್ನು ಕುರುಬ ಸಮಾಜ ಭಾಂದವರು ಖಂಡಿಸಿದ್ದು ಸರ್ಕಾರ ಆರೋಪಿಗೆ ಗಲ್ಲಿ ಶಿಕ್ಷೆ ವಿಧಿಸಬೇಕೆಂದು ಪುರಸಭೆ ಸದಸ್ಯ ಈಶ್ವರ ಕಾಳಪ್ಪನವರು ಆಗ್ರಹಸಿದರು.

ರಾಜ್ಯದಲ್ಲಿ ಕುರಿಗಾಹಿ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ಹಲ್ಲೆ, ಶೋಷಣೆಗಳು ಜರುಗುತ್ತಿದ್ದು, ಜೀವಭದ್ರತೆ ದೃಷ್ಟಿಯಿಂದ ಬಂದೂಕ ಪಡೆಯಲು ಲೈಸನ್ಸ್ ವಿತರಿಸಬೇಕು. ಮೃತಳ ಕುಟುಂಬಕ್ಕೆ ₹50 ಲಕ್ಷ ರೂಗಳನ್ನು ಪರಿಹಾರ, ಮೂರು ಜನ ಮಕ್ಕಳಿಗೆ ಸರ್ಕಾರವೇ ಉಚಿತ ವಿದ್ಯಾಭ್ಯಾಸ ನೀಡಬೇಕು. ಆರೋಪಿ ಜಮೀನು ವಶಪಡಿಸಿಕೊಂಡು ಮೃತಳ ಕುಟುಂಬಕ್ಕೆ ಹಂಚಿಕೆ ಮಾಡಬೇಕು. ಸರ್ಕಾರ ಕುರಿ ಮತ್ತು ಉಣ್ಣೆ ನಿಗಮ ಮಂಡಳಿಯಿoದ ಸಂಚಾರಿ ಕುರಿಗಾರರಿಗೆ ಕುಟುಂಬ ಒಳಗೊಂಡoತೆ ಉಚಿತ ಜೀವವಿಮೆ ಮಾಡಿಕೊಡಬೇಕೆಂದು ಮಾಚಿ ಸಚಿವ ಕೆ.ಎನ್.ಗಡ್ಡಿ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕುರಬರ ಸಮಾಜದ ಮುಖಂಡರಾದ ಹನಮಂತಪ್ಪ ಕಂಬಳಿ, ಬಸವರಾಜ ಮಲಕಾರಿ, ರಾಜೇಶ್ವರಿ ಸಾಲಗಟ್ಟಿ, ಕಲ್ಲಪ್ಪ ಹುಬ್ಬಳ್ಳಿ, ರೇಣುಕಾ ಇಬ್ರಾಹಿಂಪೂರ, ದ್ಯಾಮಣ್ಣ ಕೊಗ್ಗಿ, ರಮೇಶ ಕರೆಟ್ಟನವರ, ಮಂಜುನಾಥ ಮಾಯಣ್ಣವರ, ಶಂಕರ ಕುರಿ, ಮುದಕಪ್ಪ ಭಜಂತ್ರಿ, ಶಿವಾನಂದ ಮುತ್ತಣ್ಣವರ, ಸಮಾಜ ಭಾಂದವರು ಉಪಸ್ಥಿತರಿದ್ದರು. 

Related posts

ತಾಲೂಕಿನ ಆಡಳಿತದ ನಡೆ ದುಂದೂರ ಗ್ರಾಮದ ಕಡೆ

eNEWS LAND Team

ಇಎನ್ಎಲ್ ಬೆಳಗಿನ ಸಮಾಚಾರ

eNewsLand Team

ಧಾರವಾಡ: 28‌‌ ಹಾಗೂ‌ 29ರಂದು ಅನಧಿಕೃತ ವಿನ್ಯಾಸ ತೆರವು ಕಾರ್ಯಾಚರಣೆ

eNewsLand Team