22 C
Hubli
ಡಿಸೆಂಬರ್ 7, 2023
eNews Land
ಅಪರಾಧ

ಮರ್ಮಾಂಗ ಪ್ರದರ್ಶಿಸಿದ ನವನಗರದ ಬಸವರಾಜು!!

ಇಎನ್ಎಲ್ ಧಾರವಾಡ:

ಸಾರ್ವಜನಿಕ ಸ್ಥಳದಲ್ಲಿ ಮರ್ಮಾಂಗ ಪ್ರದರ್ಶನ ಮಾಡಿದ್ದಲ್ಲದೆ, ಯುವತಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ ಭೂಪನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

 

ಶಾಂತನಗರದ ಬಸವರಾಜು ಎಂಬಾತನೀಗ ವಿಕೃತ ಕಾಮಿ ಎಂಬ ಆರೋಪ ಹೊತ್ತಿದ್ದಾನೆ. ಈತ ಲುಂಗಿ ಎತ್ತಿ ‘ಅದನ್ನು’ ತೋರಿಸುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭಾನುವಾರ ರಾತ್ರಿ ನವನಗರದ ಕ್ಯಾನ್ಸರ್‌ ಆಸ್ಪತ್ರೆಯ ಬಸ್‌ ತಂಗುದಾಣದ ಬಳಿ ಬಸವರಾಜು ಬೈಕ್‌ ನಿಲ್ಲಿಸಿಕೊಂಡು, ಎದುರಿಗೆ ಬರುತ್ತಿದ್ದ ಇಬ್ಬರು ಯುವತಿಯರನ್ನು ನೋಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಅದನ್ನು ಪ್ರಶ್ನಿಸಿದ ಯುವತಿ ಮೇಲೆ ದೌರ್ಜನ್ಯ ಎಸಗಿ, ರಸ್ತೆಯಲ್ಲಿ ನೂಕಿ ಬೀಳುವಂತೆ ಮಾಡಿ ಗಾಯಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದೆ.

Related posts

ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ

eNewsLand Team

ಸೈನಿಕನ ಹೆಸರಲ್ಲಿ ಸೈಬರ್ ಕ್ರೈಂ! ಪಲ್ಸರ್ ಹಿಂದೆ‌ ಹೋದವನ ಕಥೆ..ಏನಾಗಿದೆ ಗೊತ್ತಾ?

eNewsLand Team

ಕಲಘಟಗಿ: ಮನಿ ಮುಂದಿದ್ದ‌ ಸಿಲ್ವರ್ ಬಣ್ಣದ ಸ್ಪ್ಲೆಂಡರ್ ಪ್ಲಸ್ ಕದ್ದೋರು‌ ಯಾರು?

eNewsLand Team