28 C
Hubli
ಸೆಪ್ಟೆಂಬರ್ 21, 2023
eNews Land
ಅಪರಾಧ

ಪೋಕ್ಸೋ ಆರೋಪಿಗೆ 4ವರ್ಷ3 ತಿಂಗಳು ಕಾರಾಗೃಹ ಶಿಕ್ಷೆ

ಇಎನ್ಎಲ್ ಬಾಗಲಕೋಟೆ: ಅಂಗಡಿಗೆ ಚಾಕಲೇಟ್ ತರಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ ಅಪರಾಧದ ಹಿನ್ನೆಲೆಯಲ್ಲಿ ಆರೋಪಿಗೆ 4 ವರ್ಷ 3 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ₹ 28 ಸಾವಿರ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶಿಸಿದೆ.

ಸಂತೋಷ ಶಿವಾನಂದ ಜೇರಕಲ್ ಆರೋಪಿತ. ಈತ ಬಾಲಕಿಗೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ ಆರೋಪದ ಎಸಗಿದ ಬಗ್ಗೆ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಕೈಗೊಂಡು ಸಾಕ್ಷಾಧಾರ ಸಂಗ್ರಹಿಸಿ ಆರೋಪಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ವಿಚಾರಣೆಗೆ ಕೈಗೆತ್ತಿಕೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಮಾಡಿದ ಅಪರಾಧ ಸಾಬೀತಾಗಿದ್ದು, ಆರೋಪಿತನಿಗೆ ಪೋಸ್ಕೋ ಕಾಯ್ದೆ ಅಪರಾಧಕ್ಕೆ 4 ವರ್ಷ 3 ತಿಂಗಳು ಶಿಕ್ಷೆ ಹಾಗೂ ₹ 28 ಸಾವಿರ ರು. ದಂಡ ವಿಧಿಸಿ ತಿರ್ಪು ನೀಡಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ಪ್ರಕರಣ ನಡೆಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎಂ.ಹಂಡಿ ವಾದವನ್ನು ಮಂಡಿಸಿದ್ದಾರೆ.

Related posts

ಬಸವರಾಜ ಹೊರಟ್ಟಿ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸ್ ಸಸ್ಪೆಂಡ್

eNEWS LAND Team

ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ

eNEWS LAND Team

ಸಾಲ ಪಡೆಯಬೇಕಾದರೆ ಹುಷಾರ್! ಕಿಡ್ನಾಪ್ ಆಗ್ತೀರಾ!!

eNEWS LAND Team