23.4 C
Hubli
ಮಾರ್ಚ್ 24, 2023
eNews Land
ಅಪರಾಧ

ಹೂಡಿಕೆ ಮಾಡಿಸುವುದಾಗಿ ಆನ್ಲೈನಲ್ಲಿ 4ಲಕ್ಷ ಪೀಕಿದ್ದವ ಮಹಾರಾಷ್ಟ್ರದಲ್ಲಿ ಅರೆಸ್ಟ್

Listen to this article

ಇಎನ್ಎಲ್ ಹುಬ್ಬಳ್ಳಿ:

ಧಾರವಾಡದ ಉದ್ಯಮಿಯೊಬ್ಬರಿಗೆ ವಾಟ್ಸಪ್ ಮೂಲಕ ಪರಿಚಯವಾಗಿ ಅವರ ಜಂಗಲ್‌ಫುಡ್ ಕಂಪನಿಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಯಾದ ಆರೋಹನ್ಸ್ ಕಂಪನಿಯವರಿಂದ ಹಣ ಹೂಡಿಕೆ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ಕೆ 4 ಲಕ್ಷ ವಂಚಿಸಿದ್ದ ಪ್ರಕರಣದ ಆರೋಪಿಯನ್ನು ಹುಬ್ಬಳ್ಳಿ ಸಿಐಎನ್ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.

ಆರೋಪಿ ಪ್ರತಿಷ್ಠಿತ ಕಂಪನಿಯ ಸಂಸ್ಥಾಪಕರ ಹೆಸರಿನಲ್ಲಿ ಬೊಟ್ಟಿಯಾಗಿ ಈ-ಮೇಲ್ ಖಾತೆ ತೆರೆದು ಉದ್ಯಮಿಯೊಂದಿಗೆ ಸಂಪರ್ಕ ಬೆಳೆಸಿ, ಹೂಡಿಕೆಯ ವ್ಯವಹಾರವನ್ನು ಕುದುರಿಸಿದ್ದ. ಹಲವಾರು ಚಾರ್ಜ್‌ಗಳಿಗೆ ಹಂತ ಹಂತವಾಗಿ ಆನ್‌ಲೈನ್ ಮತ್ತು ನಗದು ರೂಪದಲ್ಲಿ ಒಟ್ಟು 4,17,844 ವರ್ಗಾವಣೆ ಮಾಡಿಸಿಕೊಂಡಿದ್ದ. ಬಳಿಕ ಉದ್ಯಮಿಯ ಕಂಪನಿಗೆ ಯಾವುದೇ ಹೂಡಿಕೆ ಮಾಡಿಸದೆ ತಲೆಮರೆಸಿಕೊಂಡಿದ್ದ.

ಈ ಬಗ್ಗೆ ನ. 19ರಂದು ಪ್ರಕರಣ ದಾಖಲಾಗಿತ್ತು. ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸ್ ಇನಸ್ಪೆಕ್ಟರ್ ಎಂ. ಎಸ್. ಹೂಗಾರ ಮತ್ತು ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related posts

ರೈತರಿಗೆ ‘ಗಂಧ’ ಹಚ್ಚಿ ‘ನಾಮ’ ಹಾಕಿದ ವಂಚಕರು ! 

eNEWS LAND Team

ಕಲಘಟಗಿ: ಮನಿ ಮುಂದಿದ್ದ‌ ಸಿಲ್ವರ್ ಬಣ್ಣದ ಸ್ಪ್ಲೆಂಡರ್ ಪ್ಲಸ್ ಕದ್ದೋರು‌ ಯಾರು?

eNewsLand Team

ಫರ್ನಿಚರ್ ಅಂಗಡಿಯಲ್ಲಿ ಬೆಂಕಿ ಅವಘಡ!

eNEWS LAND Team