27 C
Hubli
ಡಿಸೆಂಬರ್ 7, 2023
eNews Land
ಅಪರಾಧ

ತಾಯಿ ಮಗನ ಅಶ್ಲೀಲ ಚಿತ್ರ..ಮೊಬೈಲ್ ಬಳಕೆದಾರರೆ ಎಚ್ಚರ.. ಆನ್ಲೈನ್ ವಿಕೃತಿಗೆ ಬಲಿಯಾದಿರಿ!!

ಇಎನ್ಎಲ್ ಹುಬ್ಬಳ್ಳಿ: ಮೊಬೈಲ್‌ ಆನ್‌ಲೈನ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿದ್ದಾಗ ಗೊತ್ತಿಲ್ಲದ ಹೆಸರಿನಲ್ಲಿ ಬಂದಿರುವ ಲಿಂಕ್‌ ಒತ್ತಿದರೆ, ನಿಮ್ಮ ಮೊಬೈನ್‌ನಲ್ಲಿರುವ ವೈಯಕ್ತಿಕ ಮಾಹಿತಿ ಹಾಗೂ ಫೋಟೊಗಳನ್ನೆಲ್ಲ ವಂಚಕರು ಪಡೆದು, ಮರ್ಯಾದೆಯನ್ನೇ ಹರಾಜು ಹಾಕಬಹುದು… ಎಚ್ಚರ!!

ಇಂತಹ ಪ್ರಕರಣವೊಂದು ಧಾರವಾಡದಲ್ಲಿ ಶನಿವಾರ ನಡೆದಿದ್ದು, ಮರ್ಯಾದೆ ಕಳೆದುಕೊಂಡ ಯುವಕ ವಂಚಕನ ವಿರುದ್ಧ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವಕ ಆನ್‌ಲೈನ್‌ನಲ್ಲಿ ಸಿನೆಮಾ ನೋಡುತ್ತಿದ್ದಾಗ ಮೊಬೈಲ್‌ಗೆ ಒಂದು ನೋಟಿಫಿಕೇಷನ್‌ ಬಂದಿದೆ. ಅದನ್ನು ತೆರದು ಲಿಂಕ್‌ ಒತ್ತಿದಾಗ ಅಲೌ ಎನ್ನುವ ಆಪ್ಷನ್‌ ಬಂದಿದ್ದು, ಮತ್ತೆ ಅದನ್ನು ಒತ್ತಿದ್ದಾರೆ. ಆಗ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿ ಹಾಗೂ ಫೊಟೊಗಳನ್ನು ವಂಚಕ ಪಡೆದಿದ್ದಾನೆ. ಯುವಕನ ಹಾಗೂ ತಾಯಿಯ ಫೊಟೊವನ್ನು ಅಶ್ಲೀಲ ಚಿತ್ರಗಳಿಗೆ ಜೋಡಿಸಿ, ಅವರದ್ದೇ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಕಳುಹಿಸಿ ಮಾನ ಹಾನಿ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿಲಿ ಚಾಕು ಇರಿತ; ಗಾಯಾಳು ಕಿಮ್ಸನಲ್ಲಿ

eNewsLand Team

ಯಾದವಾಡದ ಮಂಜು-ಮಡದಿ ನೆನಪಲ್ಲಿ ಮದ್ಯ ಕುಡಿದು ಸತ್ತ !! ಇದು ಪ್ರೇಮದ‌ ವಿಷ!

eNewsLand Team

ಅಣ್ಣಿಗೇರಿ ಚುನಾವಣೆಯಲ್ಲಿ ಸೀರೆ ಹಂಚಲಾಗ್ತಿದೆಯಾ? ವಾರ್ಡ್ ನಂ.4 ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು!!

eNewsLand Team