34 C
Hubli
ಫೆಬ್ರವರಿ 28, 2024
eNews Land
ಅಪರಾಧ

ನೂಲ್ವಿಯಲ್ಲಿ ಕಳ್ಳನ ಕೈಚಳಕ, ಚಿನ್ನಾಭರಣ, ನಗದು ಹೊತ್ತೊಯ್ದ: ದೂರು ದಾಖಲು

ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನೂಲ್ವೀ ಗ್ರಾಮದ ಗಂಗಾಧರ ನಗರದಲ್ಲಿರುವ ಲೋಹಿತ ಗುರುಸಂಗಪ್ಪ ಹೂಗಾರ ಅವರ ಮನೆಯ ಮುಂಚಿ ಬಾಗಿಲಕ್ಕೆ ಹಾಕಿದ್ದ ಕೀಲಿ ಮುರಿದ ಕಳ್ಳರು ಚಿನ್ನಾಭರಣ, ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.

ಮನೆಯ ಒಳಹೊಕ್ಕ ಖದೀಮರು ಹಾಲ್ ನಲ್ಲಿ ಇದ್ದ ಟ್ರೇಜರಿ ಬಾಗಿಲು ತೆಗೆದು ಅದರಲ್ಲಿದ್ದ 35ಸಾವಿರ ರು. ಮೌಲ್ಯದ 10 ಗ್ರಾಂ ಬಂಗಾರದ ಚೈನ್, 18ಸಾವಿರ ರು. ಮೌಲ್ಯದ 150 ಗ್ರಾಂ ಬೆಳ್ಳಿ ಆರತಿ ಸೆಟ್, 100 ಗ್ರಾಂ ಬೆಳ್ಳಿ ತಾಟು, ಬೆಳ್ಳಿ ಶೆಮೆ 40 ಗ್ರಾಂ, ಕುಂಕುಮ ಇಡುವ ಬಟ್ಟಲುಗಳು, ಗಣಪತಿ ಮೂರ್ತಿ 20 ಗ್ರಾಂ., ಹಾಗೂ ನಗದು 30ಸಾವಿರ ರು. ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಶಿಗ್ಗಾಂವಿಯಲ್ಲಿ ಶೂಟ್; ಕತ್ತಲಲ್ಲಿ ಮನೆಯೊಳಗೆ ಓಡಿ ಬಚಾವಾದ ಸಲ್ಮಾ!!

eNewsLand Team

ಕಸಬಾ ಪೊಲೀಸರ ಭರ್ಜರಿ ಭೇಟೆ: ಮನೆಗಳ್ಳ ಮಾಲು ಸಮೇತ ಅಂದರ್, ಕದ್ದ ಚಿನ್ನವೆಷ್ಟು? ಗೊತ್ತಾದ್ರೆ ಕಂಗಾಲಾಗ್ತೀರಿ

eNewsLand Team

ಅಕ್ಕ ತಂಗ್ಯಾರ ಅಪರಿಚಿತ ಗಂಡಸ್ರ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋಕು ಮೊದ್ಲು ಹುಬ್ಬಳ್ಯಾಗ ಏನಾಗೈತಿ ನೋಡ್ರಿ

eNewsLand Team