27 C
Hubli
ಡಿಸೆಂಬರ್ 7, 2023
eNews Land
ಅಪರಾಧ

ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯ ಹೆಣ ಬೀಳಿಸಿದ ಪುತ್ರಿ!

ಇಎನ್ಎಲ್ ಬೆಂಗಳೂರು

ಲೈಂಗಿಕ ಕಿರುಕುಳ ಕೊಡುತ್ತಿದ್ದ ತಂದೆಯನ್ನು ಸ್ನೇಹಿತರ ಜತೆಗೂಡಿ ಪುತ್ರಿ ಹತ್ಯೆ ಮಾಡಿದ್ದಾಳೆ. ಬೆಂಗಳೂರಿನ ಅಟ್ಟೂರು ಲೇಔಟ್‌ನಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದೆ.

ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್ (48) ಕೊಲೆಯಾದವ. ಈ ಸಂಬಂಧ ದೀಪಕ್ ಕುಮಾರ್ ಸಿಂಗ್ ಪುತ್ರಿ ಸೇರಿ ನಾಲ್ವರು ಪಿಯುಸಿ ವಿದ್ಯಾರ್ಥಿಗಳನ್ನು ಯಲಹಂಕ ನ್ಯೂಟೌನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ದೀಪಕ್ ಕುಮಾರ್ ಸಿಂಗ್ ನಿತ್ಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಪ್ರಮುಖ ಪತ್ರಿಕೆ ವರದಿ ಪ್ರಕಟಿಸಿದೆ.

Related posts

ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನೆ

eNEWS LAND Team

ತಾಯಿ ಮಗನ ಅಶ್ಲೀಲ ಚಿತ್ರ..ಮೊಬೈಲ್ ಬಳಕೆದಾರರೆ ಎಚ್ಚರ.. ಆನ್ಲೈನ್ ವಿಕೃತಿಗೆ ಬಲಿಯಾದಿರಿ!!

eNEWS LAND Team

ದನದ ಕೊಟ್ಟಿಗೆಗೆ ಬೆಂಕಿ 6 ದನ ಸಜೀವ ದಹನ, ಮತ್ತೊಂದು ತೀವ್ರ ಗಾಯ!

eNEWS LAND Team