27 C
Hubli
ಡಿಸೆಂಬರ್ 7, 2023
eNews Land
ಅಪರಾಧ

ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನೆ

ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನ

ಇಎನ್ಎಲ್ ಬ್ಯೂರೋ
ರಾಮನಗರ: ನಗರ ವಾಸಕ್ಕೆ ಗೀಳು ಬಿದ್ದಿದ್ದ ಪತ್ನಿ ಬೆಂಗಳೂರಿಗೆ ವಾಪಸ್ಸು ಹೋಗುವಂತೆ ಪೀಡಿಸುತ್ತಿದ್ದ ಕಾರಣಕ್ಕೆ ಬೇಸತ್ತ ಪತಿ ಪತ್ನಿಯ ಕತ್ತುಸೀಳಿ ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ.
ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ, ಗುಡ್ಡೆ ವೀರನ ಹೊಸಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಂದಿರಮ್ಮ (31) ಕೊಲೆಯಾದರೆ, ಆಕೆಯ ಪತಿ ದೇಸೀಗೌಡ (38) ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
2 ವರ್ಷಗಳ ಹಿಂದೆ ಕರೋನದಿಂದ ಇಬ್ಬರು ದಂಪತಿಗಳು ಬೆಂಗಳೂರಿನಿಂದ ಸ್ವಗ್ರಾಮ ಗುಡ್ಡೆವೀರನಹೊಸಹಳ್ಳಿ ಗ್ರಾಮಕ್ಕೆ ವಾಪಸ್ಸು ಬಂದಿದ್ದರು. ಸಣ್ಣ ಕಿರಾಣಿ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.
ಇಂದಿರಮ್ಮ ಪದೇಪದೇ ಬೆಂಗಳೂರಿಗೆ ವಾಪಸು ಹೋಗುವಂತೆ ಪೀಡಿಸುತ್ತಿದ್ದಳು. ಕಳೆದ 3-4 ದಿನಗಳ ಹಿಂದೆ ಮತ್ತೆ ಬೆಂಗಳೂರಿನ ಕ್ಯಾತೆ ತೆಗೆದಿದ್ದಳು. ಇದರಿಂದ ಬೇಸತ್ತ ದೇಸೀಗೌಡ ಪತ್ನಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಡಿಹಳ್ಳಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

Related posts

ಗೂಡ್ಸ್ ಲಾರಿ ಮತ್ತು ಬೈಕ್ ಅಪಘಾತ : ಯುವಕ ಸ್ಥಳದಲ್ಲಿಯೇ ಸಾವು

eNEWS LAND Team

ಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

eNewsLand Team

ಧಾರವಾಡದಲ್ಲಿ ಗಾಂಜಾ ಘಮಲು! ಒಬ್ಬ ಅರೆಸ್ಟ್

eNewsLand Team