24 C
Hubli
ಅಕ್ಟೋಬರ್ 7, 2022
eNews Land
ಅಪರಾಧ

ಮನುಷ್ಯನಿಗೆ‌ ಹೇಗೆಲ್ಲಾ ಸಾವು ಬರಬಹುದು? ಕಲಘಟಗಿಯಲ್ಲಿ ಬರ್ಬರವಾಗಿ ಅಪ್ಪಳಿಸಿದ ಮೃತ್ಯು!!

Listen to this article

ಇಎನ್ಎಲ್ ಧಾರವಾಡ

ಹಣೆಬರಹ ಕೆಟ್ಟಿದ್ದರೆ ಮನುಷ್ಯ ಹೇಗೆಲ್ಲಾ ಸಾಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ.
ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಲಾರಿ ಟೈರ್ ಬೇರಿಂಗ ಬ್ಲಾಸ್ಟ್ ಆಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ಭಾನುವಾರ ಬೆಳಗ್ಗೆ ದಾಸ್ತಿಕೊಪ್ಪ ಗ್ರಾಮದ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಪಾಲ್ಗೊಂಡು ಕೆಲಸ ನಿರ್ವಹಿಸುತ್ತಿದ್ದ ದಾಸ್ತಿಕೊಪ್ಪ ಗ್ರಾಮದ ಚೆನ್ನಬಸಪ್ಪ ಹುಚ್ಚಣ್ಣವರ (22) ಎದುರಲ್ಲೇ ಬೇರಿಂಗ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.

ಸ್ಪೋಟದ ರಭಸಕ್ಕೆ ಬೇರಿಂಗ್ ಚೂರುಗಳು ಚೆನ್ನಬಸಪ್ಪಗೆ ಸಿಡಿದಿವೆ. ಗಂಭೀರ ಗಾಯಗೊಂಡು ರಕ್ತಸ್ರಾವದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳೀಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

Related posts

ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯ ಹೆಣ ಬೀಳಿಸಿದ ಪುತ್ರಿ!

eNewsLand Team

ನಿವೇಶನ ಕೊಡಿಸೊದಾಗಿ ಲಕ್ಷ ಲಕ್ಷ ಗುಳುಂ! ಓದಿ ನಾಳೆ ನಿಮಗೂ ಪಂಗನಾಮ ಹಾಕಬಹುದು!

eNewsLand Team

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

eNewsLand Team