eNews Land
ಅಪರಾಧ

ಕುಂದಗೋಳದ ಕಿರಾತಕರು!! ವರದಕ್ಷಿಣೆಗಾಗಿ ಪತ್ನಿಗೆ ಹಗ್ಗ ಕಟ್ಟಿ ಹೊಡೆದ ಗಂಡ, ಅತ್ತೆ ಮಾವ, ಮೈದುನ

Listen to this article

ಇಎನ್ಎಲ್ ಕುಂದಗೋಳ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕತ್ತೆಬೆನ್ನೂರ ಗ್ರಾಮದ ಆರೋಪಿತರ ವಾಸದ ಮನೆಯಲ್ಲಿ ಲಕ್ಷ್ಮೀ ಲೋಕೇಶ ನೆಗಳೂರ ( 24) ಅವರಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ಗಂಡ, ಅತ್ತೆ, ಮಾವ, ಮೈದುನ ಸೇರಿಕೊಂಡು ಹಗ್ಗದಿಂದ ಕೈಕಾಲು ಕಟ್ಟಿ ಹೊಡೆದ ಬಗ್ಗೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೀ ಪತಿ ಆರೋಪಿ ನಂ 1 ಲೋಕೇಶ ತಂದೆ ಗದಿಗೆಪ್ಪ ನೆಗಳೂರ 32 ವರ್ಷ ಮಾವ ಆರೋಪಿ ನಂ 2 ಗದಿಗೆಪ್ಪ ತಂದೆ ಸೋಮಪ್ಪ ನೆಗಳೂರ 60 ವರ್ಷ ಅತ್ತೆ ಆರೋಪಿ ನಂ 3 ರೇಣುಕಾ ಕೋಂ ಗದಿಗೆಪ್ಪ ನೆಗಳೂರ 55 ವರ್ಷ ಮೈದುನನಾದ ಆರೋಪಿ 4 ರಾಖೇಶ ತಂದೆ ಗದಿಗೆಪ್ಪ ನೆಗಳೂರ ಎಲ್ಲರೂ ಸಾ..ಕತ್ತೆಬೆನ್ನೂರ ತಾ..ಹೂವಿನಹಡಗಲಿ ಜಿ..ವಿಜಯನಗರ ಇವರೆಲ್ಲರ ಮೇಲೆ ದೂರು ನೀಡಲಾಗಿದೆ.

ಕಲಘಟಗಿ; ಹೇಳಿದಂತೆ ನೇಣು ಹಾಕೊಂಡು ಸತ್ತ ಡ್ರೈವರ್ ಗಂಗ್ಯಾ!!

ಆರೋಪಿಗಳು ಎಲ್ಲಾ ಸೇರಿ ಲಕ್ಷ್ಮೀ ಮದುವೆಯ ಕವ 2 ತೊಲೆ ಬಂಗಾರ 2 ಲಕ್ಷ ಹಣ, & ಬಾಂಡೆ ಸಾಮಾನುಗಳನ್ನು ವರದಿಕ್ಷಿಣೆಯಾಗಿ ಪಡೆದುಕೊಂಡಿದ್ದ. ಲಕ್ಷ್ಮೀಗೆ 2 ತಿಂಗಳು ಚೆನ್ನಾಗಿ ನೋಡಿಕೊಂಡು ನಂತರ ವರದಕ್ಷಿಣೆ ತರುವಂತೆ ಹಗ್ಗದಿಂದ ಕೈಕಾಲು ಕಟ್ಟಿ ಹೊಡೆದು ಇನ್ನು 1 ಲಕ್ಷ ಹಣ ತರುವಂತೆ ಮಾನಸಿಕ & ದೈಹಿಕ ಕಿರುಕುಳ ನೀಡಿದ್ದು ಇರುತ್ತದೆ.
ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 63/2022 ಕಲಂ IPC 1860 (U/s-498A,34); DOWRY PROHIBITION ACT, 1961 (U/s-3,4) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Related posts

ಫರ್ನಿಚರ್ ಅಂಗಡಿಯಲ್ಲಿ ಬೆಂಕಿ ಅವಘಡ!

eNEWS LAND Team

ಸೆಲ್ಫಿ ಹುಚ್ಚು.. ಜೀವಕ್ಕೆ ಕುತ್ತು… ಜ್ಞಾನವೋ… ಅಜ್ಞಾನವೋ ಗೊತ್ತಿಲ್ಲ

eNEWS LAND Team

ಅಣ್ಣಿಗೇರಿ ಚುನಾವಣೆಯಲ್ಲಿ ಸೀರೆ ಹಂಚಲಾಗ್ತಿದೆಯಾ? ವಾರ್ಡ್ ನಂ.4 ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು!!

eNewsLand Team