28.6 C
Hubli
ಏಪ್ರಿಲ್ 20, 2024
eNews Land
ಅಪರಾಧ

ಇನ್ಸ್ಟಾಗ್ರಾಂ ಕ್ರೈಂ; ಹುಬ್ಬಳ್ಳಿ ಹುಡುಗಿ ಹೆಸರಲ್ಲಿ ದುಷ್ಕರ್ಮಿಗಳು ಏನ್ ಮಾಡಿದ್ದಾರೆ ಗೊತ್ತಾ?

ಇಎನ್ಎಲ್ ಧಾರವಾಡ: ಇಲ್ಲಿನ ವೀರಾಪುರ ರಸ್ತೆ ಬಡಿಗೇರ ಓಣಿಯ ನಿವಾಸಿಯಾದ ಯುವತಿಯೊಬ್ಬಳ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಚಾಟಿಂಗ್ ಮಾಡಿ ಅವರ ಗೌರವಕ್ಕೆ ಧಕ್ಕೆ ತಂದ ಪ್ರಕರಣ ಬೆಳಕಿಗೆ ಬಂದಿದೆ.

ಇಟ್ಸ್‌ ಸೋನು 143 ಎಂಬ ಖಾತೆ ತೆರೆದ ದುಷ್ಕರ್ಮಿಗಳು ಯುವತಿಯ ಫೋಟೋ ಬಳಸಿದ್ದಾರೆ. ಬಳಿಕ ಬೇರೊಬ್ಬರ ಜೊತೆಗೆ ಅಶ್ಲೀಲ ಚಾಟಿಂಗ್ ಮಾಡಿ ಹುಡುಗಿ ಹೆಸರು ಹಾಳಾಗುವಂತೆ ಬಿಂಬಿಸಿದ್ದಾರೆ.

ಈ ಬಗ್ಗೆ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Related posts

ಗೌರಿ ಲಂಕೇಶ್ ಹತ್ಯೆ: ಆರೋಪಿಗಳನ್ನು ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

eNewsLand Team

ಹುಬ್ಬಳ್ಳಿ: ಭೀಕರ ಅಪಘಾತ, ಚಾಲಕ ಸ್ಥಳದಲ್ಲೇ ಸಾವು

eNewsLand Team

ರೈಲ್ವೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಕದಿಯುತ್ತಿದ್ದ ಗೋವಾ ಆಸಾಮಿ ಅರೆಸ್ಟ್

eNEWS LAND Team