ಭೀಕರವಾಗಿ ಹೀಗೆ ಸತ್ತಿದ್ದು ಯಾರು
ಹುಬ್ಬಳ್ಳಿ : ಅ.19: ಅಕ್ಟೋಬರ್ 18 ರಂದು ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆ ಸರಹದ್ದಿನ ರಾಣೆಬೆನ್ನೂರು ದೇವರಗುಡ್ಡ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಸುಮಾರು 40 ರಿಂದ 45 ವಯಸ್ಸಿನ 5.1 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾದಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು, ಕಪ್ಪು ಮೀಸೆ ಗಡ್ಡ, ದುಂಡು ಮುಖ, ಅಗಲವಾದ ಹಣೆ, ಗಿಡ್ಡ ಮೂಗು ಹೊಂದಿರುತ್ತಾರೆ.
ಬೂದು ಬಣ್ಣದ ಕಪ್ಪು ಗೆರೆಯುಳ್ಳ ಶರ್ಟ್ ಅದರಲ್ಲಿ ಸಲ್ಮಾನ್ ಟೇಲರ್ ಎಸ್.ಪಿ.ಟಿ ಎಂದು ನಮೂದಾಗಿದೆ. ಬೂದು ಬಣ್ಣದ ಪ್ಯಾಂಟ್ ,
ಹಳದಿ ಬಣ್ಣದ ಟವಲ್ ಇರುತ್ತದೆ.
ಈ ಕುರಿತು ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪರಿಚಿ ಶವದ ಗುರುತು ಪತ್ತೆಯಾದವರು ಅಥವಾ ವಾರಸುದಾರರು ದೂರವಾಣಿ ಸಂಖ್ಯೆ 0836-2384751 ಹಾಗೂ ಮೊಬೈಲ್ ಸಂಖ್ಯೆ 9480802126 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.