ಇಎನ್ಎಲ್ ಧಾರವಾಡ
ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ನಗರದ ಮಹಿಳೆಗೆ ಅನೈತಿಕ ಸಂಬಂಧದ ಕುರಿತು ಬೆದರಿಸಿ, ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.
ಸಿದ್ಧೇಶ್ವರ ಪಾರ್ಕ್‌ನ ಉದ್ಯಮಿ ಮಹಿಳೆಗೆ ಉತ್ತರ ಪ್ರದೇಶ ಗೋರಕಪುರದ ಬೆಳಗಾವಿ ಮೂಲದ ನಿವಾಸಿ ಜಿತೇಂದ್ರ ಪಿಸೆ ಬೆದರಿಸಿದ ಆರೋಪಿ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಜಿತೇಂದ್ರ ಎರಡು ತಿಂಗಳ ಹಿಂದೆ ಮಹಿಳೆಗೆ ಕರೆ ಮಾಡಿ ಹಣ ನೀಡುವಂತೆ ಪೀಡಿಸಿದ್ದ.
ಅದಕ್ಕೆ ಒಪ್ಪದಿದ್ದಾಗ, ತನ್ನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಪತಿ ಮತ್ತು ಸಂಬಂಧಿಕರಿಗೆ ಹೇಳಿ ಕೌಟುಂಬಿಕ ಸಂಬಂಧ ಹಾಳು ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ಮಹಿಳೆಯ ಮಗಳ ಜೀವ ತೆಗೆಯುವುದಾಗಿ ಹೆದರಿಸಿ, ಹಣ ನೀಡುವಂತೆ ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.