30 C
Hubli
ನವೆಂಬರ್ 30, 2022
eNews Land
ಅಪರಾಧ

ಫೇಸ್ಬುಕ್ ಜಾಹೀರಾತು ನೋಡಿ ಮೋಸ ಹೋದ ಮೇಷ್ಟ್ರು

Listen to this article

ಇಎನ್ಎಲ್ ನವಲಗುಂದ: 

ಆನ್‌ಲೈನ್‌ನಲ್ಲಿ ವಂಚನೆ: ಫೇಸ್‌ಬುಕ್‌ನಲ್ಲಿ ಹಾಕಿರುವ ಕಾರು ಮಾರಾಟದ ಜಾಹೀರಾತು ನೋಡಿ ಖರೀದಿಸಲು ಮುಂದಾದ ಧಾರವಾಡದ ನವಲಗುಂದ ರಸ್ತೆಯ ಶಿಕ್ಷಕ ಸುರೇಶ ಕಮ್ಮಾರ ಅವರು ಆನ್‌ಲೈನ್‌ನಲ್ಲಿ ₹1.08 ಲಕ್ಷ ವಂಚನೆಗೊಳಗಾಗಿದ್ದಾರೆ.

ಜಾಹೀರಾತು ನೀಡಿದ್ದ ವ್ಯಕ್ತಿ ಹೈದರಾಬಾದ್‌ನಲ್ಲಿ ಸೇನೆಯಲ್ಲಿ ಇರುವುದಾಗಿ ಸುರೇಶ ಅವರಿಗೆ ಪರಿಚಯಿಸಿಕೊಂಡು, 2013ರ ಸ್ವಿಫ್ಟ್ ಕಾರು ಮಾರಾಟ ಮಾಡುವುದಾಗಿ ಹೇಳಿದ್ದ. ಅದನ್ನು ನಂಬಿದ ಸುರೇಶ, ಮುಂಗಡವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ್ದರು. ನಂತರ ಕಾರು ನೀಡದೆ, ಹಣವನ್ನೂ ಮರಳಿಸದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಮರೀಪೇಟೆಲಿ ಕಲಬೆರಕೆ ಮದ್ಯ ಮಾರುತ್ತಿದ್ದವ ಅರೆಸ್ಟ್

eNewsLand Team

ಸಾಲ ಪಡೆಯಬೇಕಾದರೆ ಹುಷಾರ್! ಕಿಡ್ನಾಪ್ ಆಗ್ತೀರಾ!!

eNEWS LAND Team

ರೈಲ್ವೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಕದಿಯುತ್ತಿದ್ದ ಗೋವಾ ಆಸಾಮಿ ಅರೆಸ್ಟ್

eNEWS LAND Team