22 C
Hubli
ಸೆಪ್ಟೆಂಬರ್ 11, 2024
eNews Land
ಅಪರಾಧ

ಸೈನಿಕನ ಹೆಸರಲ್ಲಿ ಸೈಬರ್ ಕ್ರೈಂ! ಪಲ್ಸರ್ ಹಿಂದೆ‌ ಹೋದವನ ಕಥೆ..ಏನಾಗಿದೆ ಗೊತ್ತಾ?

ಇಎನ್ಎಲ್ ಧಾರವಾಡ: ಸೈನಿಕನ ಹೆಸರಲ್ಲಿ ಕರೆ ಮಾಡಿ ಹಣದ ಅವಶ್ಯಕತೆ ಇರುವ ಸಲುವಾಗಿ ಬೈಕ್ ಮಾರುತ್ತಿರುವುದಾಗಿ ಹೇಳಿದ ಮಾತು ನಂಬಿ ನಗರದ ವ್ಯಕ್ತಿಯೊಬ್ಬ ₹39 ಸಾವಿರ ಕಳೆದುಕೊಂಡಿದ್ದು, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿದ ಬಾಣತಿಕಟ್ಟೆಯ ನಿವಾಸಿ ದೇವೇಂದ್ರಪ್ಪ ಕಟ್ಟಿಮನಿ ಮೋಸ ಹೋಗಿದ್ದಾರೆ. ದೇವೇಂದ್ರಪ್ಪ ಅವರಿಗೆ ವಂಚಕ ತಾನು ಸೈನಿಕ ಎಂದು ನಂಬಿಕೆ ಬರುವಂತೆ ಮಾಡಿ ಫೋನ್ ಪೇ ಮೂಲಕ ₹ 39,998 ವಂಚಕನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾನೆ.

Related posts

ಷೇರ್ ಮಾರ್ಕೆಟ್ ಹೆಸರಲ್ಲಿ ಲಕ್ಷ ಲಕ್ಷ ಪಂಗನಾಮ: ಕಣ್ಣೀರಲ್ಲಿ ಕೈ ತೊಳೆಯೊ ಸ್ಥಿತಿ!!

eNEWS LAND Team

ಪೋಕ್ಸೋ ಆರೋಪಿಗೆ 4ವರ್ಷ3 ತಿಂಗಳು ಕಾರಾಗೃಹ ಶಿಕ್ಷೆ

eNewsLand Team

ನವಲಗುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಲಾರಿಗೆ ಬೆಂಕಿ.

eNEWS LAND Team