23 C
Hubli
ನವೆಂಬರ್ 28, 2022
eNews Land
ಅಪರಾಧ

ಅಣ್ಣಿಗೇರಿ ಚುನಾವಣೆಯಲ್ಲಿ ಸೀರೆ ಹಂಚಲಾಗ್ತಿದೆಯಾ? ವಾರ್ಡ್ ನಂ.4 ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು!!

Listen to this article

ಇಎನ್ಎಲ್ ಅಣ್ಣಿಗೇರಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಮತದಾರರಿಗೆ ಆಸೆ, ಆಮಿಷ ಒಡ್ಡುತ್ತಿರುವ ಪ್ರಯತ್ನದ ಪ್ರಕರಣವೊಂದು ಜಗಜ್ಜಾಹೀರಾಗಿದೆ.

ಪುರಸಭೆ ಚುನಾವಣೆಗೆ ವಾರ್ಡ್ ನಂಬರ್ 4 ಉದಯ ನಗರದಿಂದ ಜನತಾ ಪಕ್ಷ ವ ಪಕ್ಷೇತರ  ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಬಾಬಾಜಾನ ಮೆಹಬೂಬಸಾಬ ಮುಲ್ಲಾನವರ ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಸೀರೆ ಹಂಚಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಈ ಮಹಾಶಯ ಡಿ. 25ರಂದು ಬೆಳಗ್ಗೆ 9-40 ಗಂಟೆಗೆ ಅಣ್ಣಿಗೇರಿಯ ವಾರ್ಡ ನಂಬರ್ 4 ರಲ್ಲಿನ ಅಂಬೇಡ್ಕರ ಭವನದ ಹಿಂದಿನ ರಸ್ತೆಯಲ್ಲಿ ತನ್ನ ಪರವಾಗಿ ಕೆಲಸ ಮಾಡುವ ಆರೋಪಿ 2 ನೇ ವ್ಯಕ್ತಿ ಅಬ್ಬಾಸ ಅಲ್ಲಾಭಕ್ಷ  ಎಂಬವನೊಂದಿಗೆ ಪುರಸಭೆ ಚುನಾವಣೆಯ ವೇಳೆ ತಮಗೆ ಮತ ಹಾಕುವಂತೆ ಮತದಾರರಿಗೆ ಆಮೀಷ ಒಡ್ಡುವ ಸಲುವಾಗಿ ಸೀರೆಗಳನ್ನು ಹಂಚಲು ತಂದು ಒಗೆದು ಹೋಗಿದ್ದಾರೆ.

ಈ ಮೂಲಕ ಆರೋಪಿಗಳು ಅಣ್ಣಿಗೇರಿ ಪುರಸಭೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ವರದಿ ನೀಡಿದಂತೆ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಕುರಿತು  ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.172/2021  ಕಲಂ IPC 1860 (U/s-171E,34) ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

Related posts

ಮರ್ಮಾಂಗ ಪ್ರದರ್ಶಿಸಿದ ನವನಗರದ ಬಸವರಾಜು!!

eNEWS LAND Team

ಹುಬ್ಬಳ್ಳಿ ಮಾಜಿ ಕಾರ್ಪೊರೇಟರ್ ಮಗನ ಫೋಟೊ ದುರ್ಬಳಕೆ ಮಾಡುತ್ತಿರುವ ಕಿಡಿಗೇಡಿಗಳು

eNEWS LAND Team

ನವಲಗುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಲಾರಿಗೆ ಬೆಂಕಿ.

eNEWS LAND Team