ಇಎನ್ಎಲ್ ಧಾರವಾಡ: ಹಳೇ ಹುಬ್ಬಳ್ಳಿ ಶ್ರೀ ಸಿದ್ದಾರೂಢರ ಮಠದ ಕೆರೆಯಲ್ಲಿನ ಶ್ರೀ ಸಿದ್ದಾರೂಢರ ಹಾಗೂ ಗುರುನಾಥರೂಢರ ಮೂರ್ತಿಗೆ ಪೂಜೆ ಸಲ್ಲಿಸಲು ಈಜಿ ಹೋದ ಉಮೇಶಪ್ಪ ಜಾಲಿಹಾಳ (22) ಮುಳುಗಿ ಮೃತಪಟ್ಟಿದ್ದಾನೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರಿನ ಈ ಯುವಕ ಮೃತಪಟ್ಟವ. ಮಂಗಳವಾರ ಬೆಳಗ್ಗೆ ಕೆರೆಯಲ್ಲಿ ಇರುವ ಉಭಯ ಶ್ರೀಗಳ ಪೂಜೆಗೆ ಈಜಿ ತೆರಳಿದ್ದ. ಆದರೆ, ಕೈ ಸೋತು ಅಥವಾ ಆರೋಗ್ಯ ಕ್ಷೀಣಗೊಂಡ ಹಿನ್ನೆಲೆಯಲ್ಲಿ ಕೆರೆಯಲ್ಲಿ ಮುಳುಗಿದ್ದು ಮೇಲೆ ಬಂದಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಧಾವಿಸಿದ್ದು NDRF ಮೂಲಕ ತರಿಸಿ ಕೆರೆಯಲ್ಲಿ ಮುಳುಗಿರುವ ಉಮೇಶಗಾಗಿ ಪತ್ತೆ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಆತ ಶವವಾಗಿ ಪತ್ತೆಯಾದ. ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಬಗ್ಗೆ ಹಳೆ ಹುಬ್ಬಳ್ಳಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.