23.8 C
Hubli
ಮಾರ್ಚ್ 28, 2023
eNews Land
ಅಪರಾಧ

ನೇಣು ಕುಣಿಕೆಗೆ ಕೊಂಡೊಯ್ದ ಕುಡಿತದ ಚಟ; ಕಲಘಟಗಿಯ ಈ ಸುದ್ದಿ ಓದಿ ಬುದ್ಧಿ ಕಲೀರಿ

Listen to this article

ಇಎನ್ಎಲ್ ವಾರ್ತೆ ಕಲಘಟಗಿ: ಕುಡಿತ ಬಿಡುವಂತೆ ಹಿರಿಯರು ಬುದ್ಧಿವಾದ ಹೇಳಿದ್ದಕ್ಕೆ ನನ್ನ ಮರ್ಯಾದೆ ತೆಗೆದರು ಎಂದು ನೊಂದು ತಬಕದಹೊನ್ನಳ್ಳಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಷಣ್ಮುಖ ಹೊಳೆಪ್ಪ ಅರಳಿಕಟ್ಟಿ (35) ಆತ್ಮಹತ್ಯೆ ಮಾಡಿಕೊಂಡಾತ. ಈತನ ಪತ್ನಿ ಲಕ್ಷ್ಮೀ ಅರಳಿಕಟ್ಟಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಷಣ್ಮುಖ ಹೊಳೆಪ್ಪ ಅರಳಿಕಟ್ಟಿ ಕುಡಿಯುವ ಚಟದವನಿದ್ದು, ಕುಡಿದು ಬಂದು ಮನೆಯಲ್ಲಿ ಸುಕಾ ಸುಮ್ಮನೆ ಪತ್ನಿ ಮತ್ತು ಅವರ ಅತ್ತೆ ಮಾವನ ಜೊತೆಯಲ್ಲಿ ಜಗಳವನ್ನು ಮಾಡುತ್ತಿದ್ದ. ಈ ವಿಚಾರವನ್ನು ಪತ್ನಿ ಪೊಲೀಸನವರಿಗೆ ಮತ್ತು ಸಂಬಂಧಿಕರಿಗೆ ಹಾಗೂ ಗ್ರಾಮದ ಹಿರಿಯರಿಗೆ ತಿಳಿಸಿದ್ದರು.

ತನ್ನ ಮನೆಯವರು ಪೊಲೀಸರಿಂದ ಮತ್ತು ಸಂಬಂಧಿಕರಿಂದ ಹಾಗೂ ಗ್ರಾಮದ ಹಿರಿಯರಿಂದ ನನಗೆ ಬುದ್ಧಿ ಹೇಳಿಸಿ ಊರಲ್ಲಿ ಮಾನ ಮರ್ಯಾದೆಯನ್ನು ತೆಗೆದಿದ್ದಾರೆ ಅಂತ ಮನಸ್ಸಿಗೆ ಹಚ್ಚಿಕೊಂಡ ಭೂಪ ಕುಡಿದು ಬಂದು ಅಮಲಿನಲ್ಲಿ ತಮ್ಮ ಮನೆಯ ಬಚ್ಚಲ ಮನೆಯ ಜಂತಿಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡಿದ್ದ.

ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಯಿಂದ ಚೇತರಿಸಿಕೊಳ್ಳದೆ ಫೆ.16ರಂದು ಬೆಳಗಿನ ಜಾವ 4.30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾನೆ‌.

Related posts

ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

eNEWS LAND Team

ಅಕ್ಕ ತಂಗ್ಯಾರ ಅಪರಿಚಿತ ಗಂಡಸ್ರ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋಕು ಮೊದ್ಲು ಹುಬ್ಬಳ್ಯಾಗ ಏನಾಗೈತಿ ನೋಡ್ರಿ

eNewsLand Team

ಡ್ರಗ್ಸ್ ತಡೆಗೆ ಸರ್ಕಾರದ ಜೊತೆ ಕೈ ಜೋಡಿಸಿ: ಸಿಎಂ

eNewsLand Team