ಇಎನ್ಎಲ್ ಧಾರವಾಡ: ಆನ್‌ಲೈನ್ ಆ್ಯಪ್‌ನಿಂದ ಪಡೆದ ₹4.26 ಲಕ್ಷ ಲೋನ್‌ಗೆ ಬಡ್ಡಿ ಸಮೇತ ₹25 ಲಕ್ಷ ತುಂಬಿದ ವ್ಯಕ್ತಿಗೆ ಕರೆ ಮಾಡಿ ಹಣ ತುಂಬುವಂತೆ ಹೇಳಿ, ಒಪ್ಪದಿದ್ದರೆ ಫೋಟೊವನ್ನು ಅಶ್ಲೀಲ ಚಿತ್ರಕ್ಕೆ ಎಡಿಟ್ ಮಾಡುವುದಾಗಿ ಕರೆ ಮಾಡಿ ಬೆದರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ವಿದ್ಯಾನಗರದ ಗಾವಡೆ ಅವರು ಲೋನ್‌ಕ್ಯೂಬ್ ಆ್ಯಪ್‌ನಲ್ಲಿ ₹8 ಸಾವಿರ ಲೋನ್ ಪಡೆದಿದ್ದರು. ಕಂಪನಿ ಅದರ ಬಡ್ಡಿ ಇಟ್ಟುಕೊಂಡು ₹4,900 ಅವರ ಖಾತೆಗೆ ಜಮಾ ಮಾಡಿತ್ತು. ಏಳು ದಿನದೊಳಗೆ ಲೋನ್ ಮರುಪಾವತಿಸುವಂತೆ ತಿಳಿಸಿದಾಗ ಅವರು, ಕ್ಲೀಯರ್‌ಲೋನ್, ಕ್ಯಾಶ್‌ಪಾರ್ಕ್, ಲೆಂಡ್‌ಮಾಲ್, ಸ್ಮಾಲ್‌ಲೋನ್, ಕ್ಯಾಶ್‌ಬಾಸ್, ರೂಪೇಸ್ಟಾರ್ಟ್, ಗೋಲೋನ್, ಈಸಿಕ್ರೆಡಿಟ್ ಹೀಗೆ ಬೇರೆಬೇರೆ ಆ್ಯಪ್‌ನಿಂದ ₹4.26 ಲಕ್ಷ ಲೋನ್ ಪಡೆದು, ಅದನ್ನು ಮರಳಿ ಪಾವತಿಸಿದ್ದರು. ಆದರೂ ಹಣ ಪಾವತಿಸುವಂತೆ ಲೋನ್ ನೀಡಿದ ಆ್ಯಪ್ ಕಂಪನಿ ಹೆಸರಲ್ಲಿ ಕಿರುಕುಳ ನೀಡುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲೆಂದು ಹಂತ ಹಂತವಾಗಿ ₹25 ಲಕ್ಷ ತುಂಬಿದ್ದರು.
ಆದರೂ, ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತ, ಸೆಕ್ಸ್ ವರ್ಕರ್ ಬೇಕಾ? ಕುಟುಂಬ ಸದಸ್ಯರಿಗೂ ಅಸಭ್ಯವಾಗಿ ಬೈಯುತ್ತ ಫೊಟೊವನ್ನು ಅಶ್ಲೀಲ ಚಿತ್ರಕ್ಕೆ ಎಡಿಟ್ ಮಾಡಿ, ಸ್ನೇಹಿತರಿಗೆ ಕಳುಹಿಸುತ್ತೇವೆ ಎಂದು ಬೆದರಿಸಿರುವುದಾಗಿ ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಾಣೆಯಲ್ಲಿ ದಾಖಲಾಾದ ದೂರಿನಲ್ಲಿ ತಿಳಿಸಲಾಗಿದೆ.