ಇಎನ್ಎಲ್ ಅಣ್ಣಿಗೇರಿ: ಇಲ್ಲಿನ ಮೇಟಿ ಪ್ಲಾಟಿನಲ್ಲಿನ ಮನೆಯೊಂದರ ಹಿತ್ತಲಿನಲ್ಲಿ ಟಾಕಿಯಲ್ಲಿದ್ದ ನೀರನ್ನು ತುಂಬಲು ಹೋದ ವೃದ್ಧೆ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ.
ಅನ್ನಪೂರ್ಣ ಚಂದ್ರಶೇಖರಯ್ಯ ಹರ್ತಿಮಠ (62) ಮೃತಪಟ್ಟವರು. ಇವರು ತಮ್ಮನ ಮನೆಯ ಪಕ್ಕದಲ್ಲಿಯೇ ಮನೆ ಮಾಡಿಕೊಂಡು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಸೋಮವಾರ ನೀರು ತುಂಬಲು ಹೋದ ವೇಳೆ ದುರ್ಘಟನೆ ಸಂಭವಿಸಿದೆ.
ಈ ಕುರಿತು ಅಣ್ಣಿಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
—-