ಇಎನ್ಎಲ್ ಧಾರವಾಡ: “ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರವು ತನ್ನ ಪಾಲಿನ ರಾಜ್ಯ ಜಿಎಸ್‌ಟಿಯನ್ನು ವೀಕ್ಷಕರಿಗೆ ವಿಧಿಸದಿರಲು ಸಿನೆಮಾ ಪ್ರದರ್ಶಕರಿಗರ ಸೂಚಿಸಿದೆ.ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.ಜಿಲ್ಲೆಯ ಸಿನೆಮಾ,ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ಟಿಕೇಟ್‌ನಲ್ಲಿ ಶೇ.9 ರಿಯಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ನಿರ್ದೇಶನದ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.ಸಿನೆಮಾ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳ ನೊಂದಾಯಿತ ತೆರಿಗೆ ಪಾವತಿದಾರರು ವೀಕ್ಷಕರು/ಗ್ರಾಹಕರಿಗೆ ರಾಜ್ಯದ ಪಾಲಿನ ಶೇ.9 ಜಿಎಸ್‌ಟಿ ವಿಧಿಸಬಾರದು , ಈ ಹಣವನ್ನು ಸರ್ಕಾರ ಭರಿಸಲಿದೆ. ಟಿಕೆಟ್ ಮೇಲೆ “ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಸಂಗ್ರಹಿಸಿರುವುದಿಲ್ಲ” ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿಸಿರಬೇಕು. ಈ ಆದೇಶವು
ಇಂದು ಮಾರ್ಚ್ 14 ರಿಂದ ಮುಂದಿನ ಆರು ತಿಂಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಸಿನೆಮಾ ,ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ರಾಜ್ಯ ಜಿಎಸ್‌ಟಿ ಮರುಪಾವತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರ್ಕಾರ ಪ್ರಕಟಿಸಲಿದೆ.ಜಿಎಸ್‌ಟಿ ಅಧಿಕಾರಿಗಳು ಈ ಆದೇಶ ಜಾರಿಗೊಳಿಸಿ ವರದಿ ನೀಡಲು ಸೂಚಿಸಲಾಗಿದೆ.