ಇಎನ್ಎಲ್ ಫಿಲ್ಮ್ ಕ್ಲಬ್
ರಮೇಶ್ ಅರವಿಂದ್ ಅವರ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದ 2ನೇ ಭಾಗದ ಮುಹೂರ್ತ ಗುರುವಾರ ಬೆಂಗಳೂರಿನ ಮಲ್ಲೇಶ್ವರದ ಬಂಡೆ ಗಣೇಶ ದೇವಸ್ಥಾನದಲ್ಲಿ ನಡೆಯಿತು.
ಶಿವಾಜಿ ಸುರತ್ಕಲ್ 2′ ಚಿತ್ರದಲ್ಲೂ ರಮೇಶ್ ಅರವಿಂದ್ ಸೂಪರ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ , ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ.
ರಮೇಶ ಜೊತೆ 100 ಸಿನಿಮಾಕ್ಕೆ ಜೊತೆಯಾಗಿದ್ದ ಮೇಘನಾ ಗಾಂವ್ಕರ್ ಇಲ್ಲಿ ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ದೀಪಾ ಕಾಮತ್ ಎಂಬ ಪಾತ್ರ ಮಾಡಲಿದ್ದಾರೆ.
‘ಮಗಳು ಜಾನಕಿ’ ಧಾರಾವಾಹಿ ನಟ ರಾಕೇಶ್ ಮಯ್ಯ ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಾಯಕ ಜೋಷಿ ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರವೇ ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆ ಎಂದು ಚಿತ್ರತಂಡ ತಿಳಿಸಿದೆ.
ನಕುಲ್ ಭಯಂಕರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ‘ಶಿವಾಜಿ ಸುರತ್ಕಲ್’ ಮೊದಲ ಪಾರ್ಟ್ಗೆ ‘ದಿ ಕೇಸ್ ಆಫ್ ರಣಗಿರಿ ರಹಸ್ಯ’ ಎಂಬ ಟ್ಯಾಗ್ಲೈನ್ ಇತ್ತು. ಈಗ ಎರಡನೇ ಪಾರ್ಟ್ಗೆ ‘ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಎಂಬ ಟ್ಯಾಗ್ಲೈನ್ ಇದೆ.
ಶಿವಾಜಿ ಸುರತ್ಕಲ್ 2′ ಚಿತ್ರದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಶುರುವಾಗಲಿದ್ದು, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿವೆ. ತಮ್ಮ 103ನೇ ಚಿತ್ರದಲ್ಲಿ ಹಲವು ಗೆಟಪ್ಗಳಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದಾರೆ.