ನವೆಂಬರ್ 28, 2022
eNews Land
ಜನಪದ ರಾಜ್ಯ ಸಿನೆಮಾ ಸುದ್ದಿ

ಹುಬ್ಬಳ್ಳ್ಯಾಗ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ಸ್ ಐತಿ; ಮಕ್ಳ ಕರ್ಕೊಂಡು ಹೊಂಡ್ರಿ ಮತ್ತ..!

Listen to this article

ಇಎನ್ಎಲ್ ಧಾರವಾಡ

ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಮತ್ತು ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಮಹಾ ಆಡಿಷನ್ಸ್ ಕುರಿತಾಗಿ
ಸತತ ಮೂರು ವರ್ಷಗಳಿಂದ ಕನ್ನಡ ಕಿರುತೆರೆಯನ್ನು ಆಳುತ್ತಾ ನಂಬರ್ 1 ಸ್ಥಾನದಲ್ಲೇ ಮುನ್ನುಗ್ಗುತ್ತಿರುವ ಜೀ ಕನ್ನಡ ವಾಹಿನಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಕನ್ನಡಿಗರಿಗೆ ನೀಡುತ್ತಿದೆ. 17 ಸೀಸನ್ ಗಳನ್ನು ಪೂರೈಸಿ ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಗಾಯಕರೊಟ್ಟಿಗೆ ಚಾಂಪಿಯನ್ ಶಿಪ್ ಶುರು ಮಾಡಿ ವಿಶಿಷ್ಟ ಹಾಡುಗಳನ್ನು ಹಾಡುತ್ತ ರಂಜಿಸುತ್ತಿರುವ ಸರಿಗಮಪ ಇದೀಗ ಮುದ್ದು ಮಕ್ಕಳೊಂದಿಗೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ನ್ನು ಶುರುಮಾಡುತ್ತಿದೆ. ಅಷ್ಟೇ ಅಲ್ಲದೆ ತಮ್ಮ ಅದ್ಭುತ ಅಭಿನಯದ ಮೂಲಕ ಇಡೀ ಕರುನಾಡಿನ ಮನೆಮಾತಾಗಿದ್ದ ಡ್ರಾಮಾ ಜೂನಿಯರ್ಸ್ ಯಶಸ್ವಿಯಾಗಿ ಮೂರು ಸೀಸನ್ ಗಳನ್ನೂ ಮುಗಿಸಿದ್ದು ಇದೀಗ 4ನೇ ಸೀಸನ್ ಆರಂಭಿಸುತ್ತಿದೆ. ಈ ಎರಡೂ ಕಾರ್ಯಕ್ರಮಗಳ ಆಡಿಷನ್ ಪ್ರಕ್ರಿಯೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲು ಆರಂಭವಾಗುತ್ತಿದೆ.ಡಿಸೆಂಬರ್ 19 ಭಾನುವಾರ , ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿರುವ ಲ್ಯಾಮಿಟನ್ ಸ್ಕೂಲ್ ನಲ್ಲಿ ಆಡಿಷನ್ಸ್ ನಡೆಯಲಿದ್ದು ಬೆಳಿಗ್ಗೆ 9ಗಂಟೆಗೆ ಆರಂಭವಾಗಲಿದೆ. ಆಡಿಷನ್ಸ್ ನಲ್ಲಿ ಭಾಗವಹಿಸಲು ಬರುವವರು ನಿಮ್ಮ ಮಗುವಿನ ಪಾಸ್ಪೋರ್ಟ್ ಸೈಜ್ ಫೋಟೋ ಹಾಗು ಅಡ್ರೆಸ್ ಪ್ರೂಫ್ ಜೆರಾಕ್ಸ್ ತರುವುದನ್ನು ಮರೆಯಬೇಡಿ.ಈ ಎರಡೂ ಕಾರ್ಯಕ್ರಮಗಳ ಆಡಿಷನ್ಸ್ ನಲ್ಲಿ ಭಾಗವಹಿಸಲು ಕೆಲವು ಮಾನದಂಡಗಳಿದ್ದು ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಆಡಿಷನ್ ನೀಡಲು ಮಗುವಿನ ವಯಸ್ಸು 4 ರಿಂದ 15 ವರ್ಷದೊಳಗಿರಬೇಕು ಹಾಗು ಡ್ರಾಮಾ ಜೂನಿಯರ್ಸ್ ಆಡಿಷನ್ ನಲ್ಲಿ ಭಾಗವಹಿಸುವ ಮಗುವಿನ ವಯಸ್ಸು 4 ರಿಂದ 14 ವರ್ಷದೊಳಗಿರಬೇಕು. ನಿಮ್ಮ ಮನೆಯ ಮಗುವಿನ ಪ್ರತಿಭೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

Related posts

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ರಾಜ್ಯ ಸರ್ಕಾರದ ವಿರೋಧ: ಸಿಎಂ ಬೊಮ್ಮಾಯಿ

eNewsLand Team

ಕೋವಿಡ್ ಸೋಂಕಿತರ ಟೆಲಿಮೆಡಿಸಿನ್ ಸೇವೆಗಾಗಿ ಈ ನಂಬರ್ ಸಂಪರ್ಕಿಸಿ…

eNewsLand Team

ಜಿ.ಪಂ ಸಿಬ್ಬಂದಿಗಳಿಗೆ ವಾರದಲ್ಲಿ ಒಂದು ದಿನ ಸಮವಸ್ತ್ರ

eNEWS LAND Team