23 C
Hubli
ಸೆಪ್ಟೆಂಬರ್ 25, 2023
eNews Land
ಸಿನೆಮಾ

ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಪುನೀತ‌ ನಮನ

ಇಎನ್ಎಲ್ ಬ್ಯೂರೋ ಬೆಂಗಳೂರು :

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 9 ದಿನಗಳೇ ಕಳೆದುಹೋಗಿವೆ. ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರಿಡುತ್ತಲೇ ಇದ್ದಾರೆ. ಭಾನುವಾರ ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಪುನೀತ್ ಭಾವಚಿತ್ರವನ್ನು ಇಟ್ಟು ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಕೋರಲಾಯಿತು.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ತುಮಕೂರು, ಬಳ್ಳಾರಿ, ಕೊಪ್ಪಳ, ಮೈಸೂರು ಸೇರಿದಂತೆ ಎಲ್ಲೆಡೆ ಥಿಯೇಟರ್ ನಲ್ಲಿ ‌ಅಗಲಿದ ಪ್ರೀತಿಯ ನಟನಿಗೆ‌ ನಮಿಸಲಾಯಿತು.
ಹುಬ್ಬಳ್ಳಿಯ ಅಪ್ಸರಾ ಚಿತ್ರ ಮಂದಿರದಲ್ಲಿ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಜರಂಗಿ 2 ವಿಲನ್ ವಜ್ರಗಿರಿ ಭಾಗಿಯಾಗಿದ್ದರು.
ಭಜರಂಗಿ 2 ಚಿತ್ರ ಪ್ರದರ್ಶನ ಹಿನ್ನೆಲೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರಕ್ಕೆ ಆಗಮಿಸಿರುವ ವಜ್ರಗಿರಿ ಅವರು ಮೊಂಬತ್ತಿ ಬೆಳಗಿ, ಮೌನಾಚರಣೆ ಮಾಡಿದರು.‌ಅದರಂತೆ ಹಲವಾರು ಗಣ್ಯರು ‌ಅಪ್ಪು ಆತ್ಮಕ್ಕೆ ಶಾಂತಿ ಕೋರಿದರು.

Related posts

ಧಾರವಾಹಿಯಲ್ಲಿ ಅವಕಾಶ!! ವಿಡಿಯೋ ಕಳಿಸಿ.

eNEWS LAND Team

`ಬ್ಯಾಡ್ ಬ್ರೋ` ಹುಬ್ಬಳ್ಳಿ ಪ್ರೊಡಕ್ಷನ್ ಮೊದಲ ಸಿನೆಮಾ

eNEWS LAND Team

ಕಿಯಾರಾ ಹೊಸ ಬೋಲ್ಟ್ ಲುಕ್ಕಿಗೆ ಹುಡುಗರ ಹಾರ್ಟ್ ಕ್ರ್ಯಾಶ್!!

eNewsLand Team