ಇಎನ್ಎಲ್ ಬ್ಯೂರೋ
ಬೆಂಗಳೂರು: ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಕಥೆ-ನಿರ್ದೇಶನದ ಗರುಡ ಗಮನ ವೃಷಭ ವಾಹನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದು, ಕಾರ್ತಿಕ್ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್ ಮೂಲಕ ಹಂಚಿಕೆ ಮಾಡಲಾಗುತ್ತದೆ.
ರಾಜ್ ಬಿ. ಶೆಟ್ಟಿ ಅವರ ಜತೆ ರಿಷಬ್ ಶೆಟ್ಟಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ.
ಮಿತುನ್ ಮುಕುಂದನ್ ಅವರ ಸಂಗೀತವಿದ್ದು, ರಕ್ಷಿತ್ ಶೆಟ್ಟಿ ಅವರು ಕೂಡ ಚಿತ್ರಕ್ಕೆ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ.
ರಾಜ್ ಬಿ. ಶೆಟ್ಟಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಧುನಿಕ ಮಂಗಳೂರಿನ ಸಾಂಸ್ಕೃತಿಕ ಹಾಗೂ ಕರಾವಳಿ ಹಿನ್ನೆಲೆಯಲ್ಲಿ ನಡೆಯುವ ಚಿತ್ರದ ಕಥೆಯಲ್ಲಿ ಹರಿ ಮತ್ತು ಶಿವ ಎಂಬ ಎರಡು ಪಾತ್ರಗಳ ಜೀವನ ಕಥೆಯಿದೆ. ಕರಾವಳಿಯ ಹುಲಿವೇಷ ಟ್ರೇಲರ್‌ನುದ್ದಕ್ಕೂ ಕಥೆಯೊಂದಿಗೇ ಸಾಗುತ್ತದೆ.