23 C
Hubli
ಸೆಪ್ಟೆಂಬರ್ 25, 2023
eNews Land
ಸಿನೆಮಾ

ಅಂತಾರಾಷ್ಟ್ರೀಯ ಚಿತ್ರೋತ್ಸವ: ಜಪಾನ್‌ನ ‘ರಿಂಗ್‌ ವಾಂಡರಿಂಗ್‌‘ ಶ್ರೇಷ್ಠ ಚಿತ್ರ

ಇಎನ್ಎಲ್ ಗೋವಾ: ಅಂತಾರಾಷ್ಟ್ರೀಯ ಚಿತ್ರೋತ್ಸವ: ಜಪಾನ್‌ನ ‘ರಿಂಗ್‌ ವಾಂಡರಿಂಗ್‌‘ ಶ್ರೇಷ್ಠ ಚಿತ್ರಕ್ಕೆ ಪುರಸ್ಕಾರ ದೊರೆತಿದೆ.

ಪಣಜಿಯಲ್ಲಿ ನಡೆದ 52ನೇ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಜಪಾನ್‌ನ ‘ರಿಂಗ್ ವಾಂಡರಿಂಗ್’ ಆಯ್ಕೆಯಾಗಿದ್ದು, ‘ಸ್ವರ್ಣ ಮಯೂರ’ ಗೆದ್ದಿತು . ಟೋಕಿಯೊ ನಗರ ಯುದ್ಧಪೀಡಿತವಾಗಿದ್ದ ದಿನಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಅತ್ಯುತ್ತಮ ನಿರ್ದೇಶಕರಿಗೆ ನೀಡುವ ‘ರಜತ ಮಯೂರ’ ಪ್ರಶಸ್ತಿಗೆ ಜೆಕ್ ನಿರ್ದೇಶಕ ವಾಕ್ಲಾವ್ ಕರ್ದಂಕ್ ಆಯ್ಕೆಯಾಗಿದ್ದಾರೆ. ಅವರ ನಿರ್ದೇಶನದ ‘ಸೇವಿಂಗ್ ಒನ್‌ ಹೂ ಇಸ್ ಡೆಡ್‌’ ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.

ಮರಾಠಿ ನಟ ಜಿತೇಂದ್ರ ಭೀಕುಲಾಲ್ ಜೋಶಿ ಅವರಿಗೆ ಅತ್ಯುತ್ತಮ ನಟಗೆ ನೀಡುವ ‘ರಜತ ಮಯೂರ’ ಲಭಿಸಿದೆ. ‘ಗೋದಾವರಿ’ ಎಂಬ ಚಿತ್ರದಲ್ಲಿ ದಿವಂಗತ ನಿರ್ಮಾಪಕ ಹಾಗೂ ನಟ ನಿಶಿಕಾಂತ್ ಕಾಮತ್‌ ಪಾತ್ರಕ್ಕೆ ಜೀವ ತುಂಬಿದ್ದಕ್ಕಾಗಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಚಿತ್ರ ನಿರ್ದೇಶಿಸಿದ ನಿಖಿಲ್‌ ಮಹಾಜನ್‌ ಅವರು ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ಗೆ ಭಾಜನರಾಗಿದ್ದು, ‘ರಜತ ಮಯೂರ’ ಲಭಿಸಿದೆ.

Related posts

ಪುನೀತ ರಾಜಕುಮಾರ ನಿಧನಕ್ಕೆ ಮಂತ್ರಾಲಯ ಶ್ರೀಗಳಿಂದ ಸಂತಾಪ

eNEWS LAND Team

ಸಖತ್ ಆಗಿದೆ ಶುರುವಾಗಿದೆ ಸಾಂಗ್‌

eNewsLand Team

ಗರುಡ ಗಮನ ವೃಷಭ ವಾಹನ ಚಿತ್ರದ ಟ್ರೇಲರ್ ಬಿಡುಗಡೆ

eNEWS LAND Team